BREAKING: ಕಲ್ಲು ಗಣಿಗಾರಿಕೆ ವೇಳೆ ಕಲ್ಲುಮಣ್ಣು ಕುಸಿದು ಕಾರ್ಮಿಕ ಸಾವು

ಬಾಗಲಕೋಟೆ: ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ವೇಳೆಯಲ್ಲಿ ಕಲ್ಲು ಮಣ್ಣು ಕುಸಿತಗೊಂಡು ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಜಕನೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಜಾಗದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಆರೋಪ ಕೇಳಿ ಬಂದಿತ್ತು. ಇಲ್ಲಿ ಗಣಿಗಾರಿಕೆ ವೇಳೆಯಲ್ಲಿ ಕಲ್ಲು ಮಣ್ಣು ಕುಸಿತಗೊಂಡು ಚಿನಗುಂಡಿಯ ಹನುಮಂತ ಮೆಳ್ಳಿಗೇರಿ(28) ಸಾವನ್ನಪ್ಪಿದ್ದಾರೆ.

ಈ ವಿಷಯ ತಿಳಿದು ಸ್ಥಳದಕ್ಕೆ ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.