ಇರಾನ್ ಕರಾವಳಿಯಲ್ಲಿ ಸರಣಿ ಸ್ಫೋಟ: : ಮೂರು ಅಮೆರಿಕದ ಡ್ರೋನ್ ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೆ

ಟೆಹ್ರಾನ್: ಇರಾನ್‌ನ ದಕ್ಷಿಣ ಕರಾವಳಿಯ ಕ್ವೆಶ್ಮ್ ದ್ವೀಪದಲ್ಲಿ ಐದು ಸ್ಫೋಟಗಳು ಸಂಭವಿಸಿರುವ ವರದಿಯಾಗಿದೆ. ಹಾರ್ಮುಜ್ ಜಲಸಂಧಿ ಸಮೀಪದ ಬಂದರ್ ಲೆಂಗೆಯಲ್ಲೂ ಸ್ಫೋಟದ ಸದ್ದು ಕೇಳಿಬಂದಿದೆ. ಸ್ಫೋಟದ ವೇಳೆ ಎರಡು ವಿಮಾನಗಳು ಹಾರಾಡುತ್ತಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಸ್ಫೋಟಗಳಿಗೆ ಕಾರಣವೇನು, ಸಾವುನೋವು ಅಥವಾ ಆಸ್ತಿ ಹಾನಿಯಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಮೆರಿಕದ ದಾಳಿಯಿಂದ ಸ್ಫೋಟ ಸಂಭವಿಸಿದೆ ಎಂಬುದಕ್ಕೂ ಅಧಿಕೃತ ದೃಢೀಕರಣವಿಲ್ಲ.

ಇದೇ ವೇಳೆ, ಮೂರು ಅಮೆರಿಕದ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಕ್ವೆಶ್ಮ್ ದ್ವೀಪದ ಬಳಿ ಎರಡು MQM-170 ವಿಚಕ್ಷಣಾ ಡ್ರೋನ್‌ಗಳನ್ನು ವಶಪಡಿಸಿಕೊಂಡಿದ್ದು, ಹಾರ್ಮುಜ್ ಜಲಸಂಧಿಯ ಪೂರ್ವ ಭಾಗದಲ್ಲಿ MQ-9 ಡ್ರೋನ್ ನಾಶಪಡಿಸಲಾಗಿದೆ ಎಂದು IRGC ತಿಳಿಸಿದೆ. ಇದು ಹೊಡೆದುರುಳಿಸಿದ 55ನೇ ಡ್ರೋನ್ ಎಂದು ಪ್ರತಿಪಾದಿಸಿದೆ.