ಜಲಂಧರ್: 9ನೇ ಹೀರೋ ಏಷ್ಯನ್ ಹಾಕಿ ಚಾಂಪಿಯನ್ಶಿಪ್ನಲ್ಲಿ ಭಾರತ ತನ್ನ ಗೆಲುವಿನ ಓಟ ಮುಂದುವರಿಸಿದೆ. ಸೋಮವಾರ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾವನ್ನು 8-0 ಗೋಲುಗಳ ಅಂತರದಿಂದ ಮಣಿಸಿದ ಭಾರತ, ಟೂರ್ನಿಯಲ್ಲಿ ಸತತ ಐದನೇ ಗೆಲುವು ದಾಖಲಿಸಿದೆ.
ಇದೇ ದಿನ ನಡೆದ ಮೊದಲ ಪಂದ್ಯದಲ್ಲಿ ಚೀನಾ ಮತ್ತು ಬಾಂಗ್ಲಾದೇಶ 1-1 ಗೋಲುಗಳಿಂದ ಡ್ರಾ ಸಾಧಿಸಿದವು. ಮತ್ತೊಂದು ಪಂದ್ಯದಲ್ಲಿ ಜಪಾನ್ 2-1 ಅಂತರದಿಂದ ಮಲೇಷ್ಯಾವನ್ನು ಸೋಲಿಸಿತು.

ಜಲಂಧರ್ನ ಒಲಿಂಪಿಯನ್ ಸುರ್ಜಿತ್ ಸಿಂಗ್ ಹಾಕಿ ಕ್ರೀಡಾಂಗಣದಲ್ಲಿ ಸೋಮವಾರ ಪೂಲ್ ಹಂತದ ಪಂದ್ಯಗಳು ಮುಕ್ತಾಯಗೊಂಡವು. ಮಂಗಳವಾರ ವಿಶ್ರಾಂತಿ ದಿನವಾಗಿದ್ದು, ನವೆಂಬರ್ 4ರಿಂದ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಮೊಹಾಲಿಯ ಒಲಿಂಪಿಯನ್ ಬಲ್ಬೀರ್ ಸಿಂಗ್ ಸೀನಿಯರ್ ಅಂತರರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ನಡೆಯಲಿವೆ.



