ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಮರ್ಡರ್ ಎನ್ನುವಂತೆ ಅಡ್ವಾನ್ಸ್ ಹಣ ಕೊಟ್ಟಿದ್ದಂತ ಮಾಲೀಕನನ್ನೇ ತಂದೆ ಹಾಗೂ ಮಗ ಸೇರಿಕೊಂಡು ಕೊಲೆ ಮಾಡಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಕಡಬಗೆರೆ ಕ್ರಾಸ್ ಬಳಿಯಲ್ಲಿ ಆರ್ ಆರ್ ಇಂಡಸ್ಟ್ರೀಸ್ ಅನ್ನು ರಮೇಶ್ ನಡೆಸುತ್ತಿದ್ದರು. ಇಲ್ಲಿ ಕೆಲಸ ಮಾಡುತ್ತಿದ್ದಂತ ಸೈಯದ್ ತಾಜೂದ್ದೀನ್ (50) ಹಾಗೂ ಸೈಯದ್ ಅಯೂಬ್ ಅವರಿಗೆ ಮಾಲೀಕನಿಂದ 6 ಲಕ್ಷ ಹಣವನ್ನು ಅಡ್ವಾನ್ಸ್ ಆಗಿ ಪಡೆದಿದ್ದರು. ಈ ಹಣವನ್ನು ಪಡೆದಿದ್ದಂತ ತಂದೆ ಮಗ ಇಬ್ಬರೂ ಕೆಲಸಕ್ಕೆ ಬಂದಿರಲಿಲ್ಲ.
ಈ ಹಿನ್ನಲೆಯಲ್ಲಿ ರಮೇಶ್ ಅವರು ಸೈಯದ್ ತಾಜೂದ್ದೀನ್ ಹಾಗೂ ಅಯೂಬ್ ನನ್ನು ಮಾಲೀಕ ರಮೇಶ್ ಕೇಳಿದ್ದಾರೆ. ಆದರೇ ಕೆಲಸಕ್ಕೆ ಬಾರದೇ ಸತಾಯಿಸಿದ ಕಾರಣ, ಇಂದು ಮಧ್ಯಾಹ್ನ ಇದೇ ವಿಚಾರವಾಗಿ ಗಲಾಟೆಯಾಗಿದೆ. ಈ ವೇಳೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರಮೇಶ್ ನನ್ನು ತಂದೆ-ಮಗ ಸೇರಿಕೊಂಡು ಕೊಚ್ಚಿ ಕೊಲೆಗೈದಿದ್ದಾರೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.




