ಟೆಹ್ರಾನ್: ಅಮೆರಿಕದ ಸೇನಾ ಬೆದರಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶತ್ರುಗಳಿಗೆ ತೀವ್ರ ಹೊಡೆತ ನೀಡಲು ಇರಾನ್ ವಿಶಾಲ ಯುದ್ಧತಂತ್ರ ರೂಪಿಸಿದೆ. ಯಾವುದೇ ಬೆದರಿಕೆಗೆ ತಕ್ಷಣ ಮತ್ತು ನಿರ್ಣಾಯಕವಾಗಿ ಪ್ರತಿಕ್ರಿಯಿಸಲು ಸೇನೆ ಸನ್ನದ್ಧವಾಗಿದೆ ಎಂದು ಐಆರ್‌ಜಿಸಿ ವಕ್ತಾರ ಹೊಸೈನ್ ಮೊಹೆಬ್ಬಿ ತಿಳಿಸಿದ್ದಾರೆ.
ಹೊಸ ಭೌಗೋಳಿಕ ಪ್ರದೇಶಗಳಲ್ಲಿ ಶತ್ರುಗಳ ಗುರಿಗಳನ್ನು ಗುರುತಿಸಿ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ಅವರು ಸೇನಾ ಕಮಾಂಡರ್‌ಗಳಿಗೆ ತಕ್ಷಣ ಪರಿಣಾಮಕಾರಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇರಾನ್ ವಿರುದ್ಧ ಸಂಭಾವ್ಯ ಸೇನಾ ಕಾರ್ಯಾಚರಣೆಯ ಆಯ್ಕೆಗಳ ಕುರಿತು ಅಮೆರಿಕದ ಸೇನಾ ಅಧಿಕಾರಿಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮಧ್ಯಂತರ ಚುನಾವಣೆ ಬಳಿಕ ಅಲ್ಪಾವಧಿಯ ತೀವ್ರ ದಾಳಿ ನಡೆಯುವ ಸಾಧ್ಯತೆಯ ಬಗ್ಗೆಯೂ ವರದಿಯಾಗಿದೆ.
ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಗೆ ಪ್ರತಿಯಾಗಿ ಇರಾನ್ ಕ್ಷಿಪಣಿ, ಡ್ರೋನ್ ದಾಳಿ ನಡೆಸಿತ್ತು. ಹೋರ್ಮುಜ್ ಜಲಸಂಧಿಯ ಮೇಲಿನ ಹಿಡಿತವನ್ನೂ ಬಿಗಿಗೊಳಿಸಿತ್ತು. ಇದರಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಿದೆ.



