ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಮಂಡಳಿಯು 2027ನೇ ಸಾಲಿನ 10ನೇ ತರಗತಿ (ICSE) ಹಾಗೂ 12ನೇ ತರಗತಿ (ISC) ಬೋರ್ಡ್ ಪರೀಕ್ಷೆಗಳ ಅಧಿಕೃತ ವೇಳಾಪಟ್ಟಿಯನ್ನು(ICSE ISC Exam Schedule) ಬಿಡುಗಡೆ ಮಾಡಿದೆ. ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ ಆದ cisce.org ಗೆ ಭೇಟಿ ನೀಡಿ ವಿಷಯವಾರು ಪೂರ್ಣ ವೇಳಾಪಟ್ಟಿಯನ್ನು ವೀಕ್ಷಿಸಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರಕಟಿತ ವೇಳಾಪಟ್ಟಿಯ ಪ್ರಕಾರ, 12ನೇ ತರಗತಿ (ಐಎಸ್‌ಸಿ) ಪರೀಕ್ಷೆಗಳು ಫೆಬ್ರವರಿ 9 ರಿಂದ ಪ್ರಾರಂಭವಾಗಿ ಏಪ್ರಿಲ್ 8, 2027 ರಂದು ಮುಕ್ತಾಯಗೊಳ್ಳಲಿವೆ. ಇನ್ನು 10ನೇ ತರಗತಿ (ಐಸಿಎಸ್‌ಇ) ಪರೀಕ್ಷೆಗಳು ಫೆಬ್ರವರಿ 15 ರಿಂದ ಆರಂಭವಾಗಿ ಮಾರ್ಚ್ 31, 2027 ರವರೆಗೆ ಜರುಗಲಿವೆ. ಭಾರತ ಮತ್ತು ವಿದೇಶಗಳಾದ್ಯಂತ 10ನೇ ತರಗತಿಗೆ 2,835 ಪರೀಕ್ಷಾ ಕೇಂದ್ರಗಳು ಹಾಗೂ 12ನೇ ತರಗತಿಗೆ 1,477 ಕೇಂದ್ರಗಳನ್ನು ನಿಗದಿಪಡಿಸಲಾಗಿದೆ.
3.79 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ:
ಈ ಬಾರಿಯ ವಾರ್ಷಿಕ ಬೋರ್ಡ್ ಪರೀಕ್ಷೆಗಳಿಗೆ ಒಟ್ಟು 3,79,980 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 3,106 ಅಂಗಸಂಸ್ಥೆ ಶಾಲೆಗಳ 2,69,955 ವಿದ್ಯಾರ್ಥಿಗಳು 76 ವಿಷಯಗಳಲ್ಲಿ 10ನೇ ತರಗತಿ ಪರೀಕ್ಷೆ ಬರೆಯಲಿದ್ದಾರೆ. ಹಾಗೆಯೇ, 1,651 ಶಾಲೆಗಳ 1,10,025 ವಿದ್ಯಾರ್ಥಿಗಳು 60 ವಿಷಯಗಳಲ್ಲಿ 12ನೇ ತರಗತಿ ಪರೀಕ್ಷೆಯನ್ನು ಎದುರಿಸಲಿದ್ದಾರೆ.
ಅತಿ ಹೆಚ್ಚು ಅಭ್ಯರ್ಥಿಗಳು ಉತ್ತರ ಪ್ರದೇಶದಿಂದ; ಕರ್ನಾಟಕದಲ್ಲಿ ಎಷ್ಟಿದ್ದಾರೆ?
ಐಸಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತರ ಪ್ರದೇಶವು ಗರಿಷ್ಠ 51,168 ಅಭ್ಯರ್ಥಿಗಳೊಂದಿಗೆ ಮುಂಚೂಣಿಯಲ್ಲಿದೆ. ಪಶ್ಚಿಮ ಬಂಗಾಳ (46,521) ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಿಂದ 33,417 ವಿದ್ಯಾರ್ಥಿಗಳು, ಮಹಾರಾಷ್ಟ್ರದಿಂದ 31,035, ಪಂಜಾಬ್‌ನಿಂದ 19,308 ಹಾಗೂ ಜಾರ್ಖಂಡ್‌ನಿಂದ 17,201 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಇನ್ನು 12ನೇ ತರಗತಿ (ಐಎಸ್‌ಸಿ) ಪರೀಕ್ಷೆಯಲ್ಲೂ ಉತ್ತರ ಪ್ರದೇಶ (34,702) ಮೊದಲ ಸ್ಥಾನದಲ್ಲಿದ್ದು, ಪಶ್ಚಿಮ ಬಂಗಾಳ (30,235) ನಂತರದ ಸ್ಥಾನದಲ್ಲಿದೆ. ಉತ್ತರಾಖಂಡ (5,629), ಪಂಜಾಬ್ (5,479), ಜಾರ್ಖಂಡ್ (5,356), ಮಹಾರಾಷ್ಟ್ರ (4,660), ತಮಿಳುನಾಡು (3,572), ಕೇರಳ (3,491) ಹಾಗೂ ಕರ್ನಾಟಕದಿಂದ 3,010 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷಾ ಸಮಯದಲ್ಲಿ ಮಹತ್ವದ ಬದಲಾವಣೆ:
ಐಸಿಎಸ್‌ಇ 2027ರ ಪರೀಕ್ಷಾ ಸಮಯದಲ್ಲಿ ಪ್ರಮುಖ ಬದಲಾವಣೆ ತರಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಓದಲು ನೀಡುವ ಸಮಯ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಲಿದ್ದು, ಉತ್ತರ ಬರೆಯಲು 10:15 ರಿಂದ ಅವಕಾಶವಿರುತ್ತದೆ. ಈ ಹಿಂದೆ ಪ್ರಶ್ನೆಪತ್ರಿಕೆ ಓದಲು 10:45 ಮತ್ತು ಬರೆಯಲು 11:00 ಗಂಟೆಯ ಸಮಯವಿತ್ತು. ಆದ್ದರಿಂದ ವಿದ್ಯಾರ್ಥಿಗಳು ಬೆಳಿಗ್ಗೆ 9:45ರ ಒಳಗಾಗಿ ಪರೀಕ್ಷಾ ಕೊಠಡಿಯಲ್ಲಿ ಆಸೀನರಾಗಿರಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಎನ್‌ಇಪಿ 2020 ಆಧಾರಿತ ಸಾಮರ್ಥ್ಯ ಪರೀಕ್ಷೆ: ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ಕ್ಕೆ ಅನುಗುಣವಾಗಿ ಪರಿಕಲ್ಪನಾ ತಿಳುವಳಿಕೆ, ಪ್ರಾಯೋಗಿಕ ಜ್ಞಾನ ಮತ್ತು ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯವನ್ನು ಒರೆಗೆ ಹಚ್ಚುವ ನಿಟ್ಟಿನಲ್ಲಿ ಪರೀಕ್ಷಾ ಮೌಲ್ಯಮಾಪನ ವ್ಯವಸ್ಥೆಯನ್ನು ಬಲಪಡಿಸಲಾಗಿದೆ ಎಂದು ಸಿಐಎಸ್‌ಸಿಇ ಮುಖ್ಯ ಕಾರ್ಯನಿರ್ವಾಹಕ ಹಾಗೂ ಕಾರ್ಯದರ್ಶಿ ಡಾ. ಜೋಸೆಫ್ ಇಮ್ಯಾನುಯೆಲ್ ತಿಳಿಸಿದ್ದಾರೆ. ಪರೀಕ್ಷೆಗಳ ಪ್ರವೇಶ ಪತ್ರಗಳನ್ನು (Admit Cards) ಡಿಸೆಂಬರ್ 2026ರ ಮಧ್ಯಭಾಗದಲ್ಲಿ ವಿತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಐಸಿಎಸ್‌ಇ (10ನೇ ತರಗತಿ) ಬೋರ್ಡ್ ಪರೀಕ್ಷಾ ವೇಳಾಪಟ್ಟಿ – 2027 (ICSE Exam Schedule)
| ದಿನಾಂಕ | ದಿನ | ವಿಷಯ |
| 15 ಫೆಬ್ರವರಿ 2027 | ಸೋಮವಾರ | ಇಂಗ್ಲಿಷ್ ಲ್ಯಾಂಗ್ವೇಜ್ – ಇಂಗ್ಲಿಷ್ ಪೇಪರ್ 1 |
| 16 ಫೆಬ್ರವರಿ 2027 | ಮಂಗಳವಾರ | ಆರ್ಟ್ ಪೇಪರ್ 4 (ಅಪ್ಲೈಡ್ ಆರ್ಟ್) |
| 18 ಫೆಬ್ರವರಿ 2027 | ಗುರುವಾರ | ಲಿಟರೇಚರ್ ಇನ್ ಇಂಗ್ಲಿಷ್ – ಇಂಗ್ಲಿಷ್ ಪೇಪರ್ 2 |
| 22 ಫೆಬ್ರವರಿ 2027 | ಸೋಮವಾರ | ಗಣಿತ (Mathematics) |
| 23 ಫೆಬ್ರವರಿ 2027 | ಮಂಗಳವಾರ | ಆರ್ಟ್ ಪೇಪರ್ 1 (ಸ್ಟಿಲ್ ಲೈಫ್) |
| 24 ಫೆಬ್ರವರಿ 2027 | ಬುಧವಾರ | ಗ್ರೂಪ್ III ಎಲೆಕ್ಟಿವ್ – ಸೆಕ್ಷನ್ B |
| 26 ಫೆಬ್ರವರಿ 2027 | ಶುಕ್ರವಾರ | ಇತಿಹಾಸ ಮತ್ತು ಪೌರನೀತಿ (H.C.G. ಪೇಪರ್ 1) |
| 1 ಮಾರ್ಚ್ 2027 | ಸೋಮವಾರ | ಭೂಗೋಳ ಶಾಸ್ತ್ರ (H.C.G. ಪೇಪರ್ 2) |
| 2 ಮಾರ್ಚ್ 2027 | ಮಂಗಳವಾರ | ಆರ್ಟ್ ಪೇಪರ್ 2 (ನೇಚರ್ ಡ್ರಾಯಿಂಗ್/ಪೇಂಟಿಂಗ್) |
| 4 ಮಾರ್ಚ್ 2027 | ಗುರುವಾರ | ಹಿಂದಿ |
| 8 ಮಾರ್ಚ್ 2027 | ಸೋಮವಾರ | ಭೌತಶಾಸ್ತ್ರ – ಸೈನ್ಸ್ ಪೇಪರ್ 1 |
| 12 ಮಾರ್ಚ್ 2027 | ಶುಕ್ರವಾರ | ರಸಾಯನಶಾಸ್ತ್ರ – ಸೈನ್ಸ್ ಪೇಪರ್ 2 |
| 15 ಮಾರ್ಚ್ 2027 | ಸೋಮವಾರ | ಜೀವಶಾಸ್ತ್ರ – ಸೈನ್ಸ್ ಪೇಪರ್ 3 |
| 16 ಮಾರ್ಚ್ 2027 | ಮಂಗಳವಾರ | ಆರ್ಟ್ ಪೇಪರ್ 3 (ಒರಿಜಿನಲ್ ಕಂಪೋಸಿಷನ್) |
| 17 ಮಾರ್ಚ್ 2027 | ಬುಧವಾರ | ಗ್ರೂಪ್ III ಎಲೆಕ್ಟಿವ್ – ಸೆಕ್ಷನ್ A / ಟೆಕ್ನಿಕಲ್ ಡ್ರಾಯಿಂಗ್ ಅಪ್ಲಿಕೇಶನ್ಸ್ |
| 19 ಮಾರ್ಚ್ 2027 | ಶುಕ್ರವಾರ | ಗ್ರೂಪ್ I ಲ್ಯಾಂಗ್ವೇಜಸ್ |
| 25 ಮಾರ್ಚ್ 2027 | ಗುರುವಾರ | ಪರಿಸರ ವಿಜ್ಞಾನ (ಗ್ರೂಪ್ II ಎಲೆಕ್ಟಿವ್) |
| 29 ಮಾರ್ಚ್ 2027 | ಸೋಮವಾರ | ಕಮರ್ಷಿಯಲ್ ಸ್ಟಡೀಸ್ (ಗ್ರೂಪ್ II ಎಲೆಕ್ಟಿವ್) |
| 31 ಮಾರ್ಚ್ 2027 | ಬುಧವಾರ | ಅರ್ಥಶಾಸ್ತ್ರ (ಗ್ರೂಪ್ II ಎಲೆಕ್ಟಿವ್) / ಫ್ರೆಂಚ್, ಸಂಸ್ಕೃತ |
ಐಎಸ್‌ಸಿ (12ನೇ ತರಗತಿ) ಬೋರ್ಡ್ ಪರೀಕ್ಷಾ ವೇಳಾಪಟ್ಟಿ – 2027 (ISC Exam Schedule)
| ದಿನಾಂಕ | ದಿನ | ವಿಷಯ |
| 9 ಫೆಬ್ರವರಿ 2027 | ಮಂಗಳವಾರ | ಪರಿಸರ ವಿಜ್ಞಾನ, ವೆಸ್ಟರ್ನ್ ಮ್ಯೂಸಿಕ್ – ಪೇಪರ್ 1 (ಥಿಯರಿ) |
| 10 ಫೆಬ್ರವರಿ 2027 | ಬುಧವಾರ | ಇಂಗ್ಲಿಷ್ ಪೇಪರ್ 1 (ಇಂಗ್ಲಿಷ್ ಲ್ಯಾಂಗ್ವೇಜ್), ಮಾಡರ್ನ್ ಇಂಗ್ಲಿಷ್ – ಪೇಪರ್ 1 |
| 12 ಫೆಬ್ರವರಿ 2027 | ಶುಕ್ರವಾರ | ಅಪ್ಲೈಡ್ ಮ್ಯಾಥಮ್ಯಾಟಿಕ್ಸ್, ರೋಬೋಟಿಕ್ಸ್, ಜಿಯೋಮೆಟ್ರಿಕಲ್ & ಬಿಲ್ಡಿಂಗ್ ಡ್ರಾಯಿಂಗ್, ಬಯೋಟೆಕ್ನಾಲಜಿ |
| 13 ಫೆಬ್ರವರಿ 2027 | ಶನಿವಾರ | ಆರ್ಟ್ ಪೇಪರ್ 1 (ಡ್ರಾಯಿಂಗ್/ಪೇಂಟಿಂಗ್ ಫ್ರಮ್ ಸ್ಟಿಲ್ ಲೈಫ್) |
| 15 ಫೆಬ್ರವರಿ 2027 | ಸೋಮವಾರ | ಇಂಗ್ಲಿಷ್ – ಪೇಪರ್ 2 (ಲಿಟರೇಚರ್ ಇನ್ ಇಂಗ್ಲಿಷ್) |
| 16 ಫೆಬ್ರವರಿ 2027 | ಮಂಗಳವಾರ | ಮಾಡರ್ನ್ ಇಂಗ್ಲಿಷ್ – ಪೇಪರ್ 2 (ಲಿಟರೇಚರ್ ಇನ್ ಇಂಗ್ಲಿಷ್) |
| 18 ಫೆಬ್ರವರಿ 2027 | ಗುರುವಾರ | ಅರ್ಥಶಾಸ್ತ್ರ (Economics) |
| 22 ಫೆಬ್ರವರಿ 2027 | ಸೋಮವಾರ | ಪ್ರಾದೇಶಿಕ ಮತ್ತು ವಿದೇಶಿ ಭಾಷೆಗಳು (ಬೆಂಗಾಲಿ, ಗುಜರಾತಿ, ಹಿಂದಿ, ತಮಿಳು, ತೆಲುಗು, ಉರ್ದು, ಸಂಸ್ಕೃತ ಇತ್ಯಾದಿ) |
| 24 ಫೆಬ್ರವರಿ 2027 | ಬುಧವಾರ | ರಸಾಯನಶಾಸ್ತ್ರ – ಪೇಪರ್ 1 (ಥಿಯರಿ) |
| 26 ಫೆಬ್ರವರಿ 2027 | ಶುಕ್ರವಾರ | ಅಕೌಂಟೆನ್ಸಿ (Accountancy) |
| 27 ಫೆಬ್ರವರಿ 2027 | ಶನಿವಾರ | ಆರ್ಟ್ ಪೇಪರ್ 2 (ಡ್ರಾಯಿಂಗ್/ಪೇಂಟಿಂಗ್ ಫ್ರಮ್ ನೇಚರ್) |
| 1 ಮಾರ್ಚ್ 2027 | ಸೋಮವಾರ | ಗಣಿತ (Mathematics) |
| 3 ಮಾರ್ಚ್ 2027 | ಬುಧವಾರ | ದೈಹಿಕ ಶಿಕ್ಷಣ (Physical Education) |
| 4 ಮಾರ್ಚ್ 2027 | ಗುರುವಾರ | ಗೃಹ ವಿಜ್ಞಾನ – ಪೇಪರ್ 1 (ಥಿಯರಿ), ಹಿಂದೂಸ್ತಾನಿ ಸಂಗೀತ |
| 8 ಮಾರ್ಚ್ 2027 | ಸೋಮವಾರ | ಭೌತಶಾಸ್ತ್ರ – ಪೇಪರ್ 1 (ಥಿಯರಿ) |
| 9 ಮಾರ್ಚ್ 2027 | ಮಂಗಳವಾರ | ಮಾಸ್ ಮೀಡಿಯಾ & ಕಮ್ಯುನಿಕೇಷನ್ |
| 11 ಮಾರ್ಚ್ 2027 | ಗುರುವಾರ | ಬಿಸಿನೆಸ್ ಸ್ಟಡೀಸ್ (Business Studies) |
| 12 ಮಾರ್ಚ್ 2027 | ಶುಕ್ರವಾರ | ಭೂಗೋಳ ಶಾಸ್ತ್ರ (Geography) |
| 13 ಮಾರ್ಚ್ 2027 | ಶನಿವಾರ | ಆರ್ಟ್ ಪೇಪರ್ 4 (ಒರಿಜಿನಲ್ ಇಮ್ಯಾಜಿನೇಟಿವ್ ಕಂಪೋಸಿಷನ್) |
| 15 ಮಾರ್ಚ್ 2027 | ಸೋಮವಾರ | ಜೀವಶಾಸ್ತ್ರ – ಪೇಪರ್ 1 (ಥಿಯರಿ) |
| 17 ಮಾರ್ಚ್ 2027 | ಬುಧವಾರ | ಕಂಪ್ಯೂಟರ್ ಸೈನ್ಸ್ – ಪೇಪರ್ 1 (ಥಿಯರಿ) |
| 19 ಮಾರ್ಚ್ 2027 | ಶುಕ್ರವಾರ | ಇತಿಹಾಸ (History) |
| 20 ಮಾರ್ಚ್ 2027 | ಶನಿವಾರ | ಆರ್ಟ್ ಪೇಪರ್ 5 (ಕ್ರಾಫ್ಟ್ಸ್ ‘A’) |
| 24 ಮಾರ್ಚ್ 2027 | ಬುಧವಾರ | ಆರ್ಟ್ ಪೇಪರ್ 3 |
| 25 ಮಾರ್ಚ್ 2027 | ಗುರುವಾರ | ಸಮಾಜಶಾಸ್ತ್ರ (Sociology) |
| 29 ಮಾರ್ಚ್ 2027 | ಸೋಮವಾರ | ಕಾಮರ್ಸ್ (Commerce) |
| 31 ಮಾರ್ಚ್ 2027 | ಬುಧವಾರ | ಮನಃಶಾಸ್ತ್ರ (Psychology) |
| 2 ಏಪ್ರಿಲ್ 2027 | ಶುಕ್ರವಾರ | ರಾಜ್ಯಶಾಸ್ತ್ರ (Political Science) |
| 3 ಏಪ್ರಿಲ್ 2027 | ಶನಿವಾರ | ಫ್ಯಾಷನ್ ಡಿಸೈನಿಂಗ್ – ಪೇಪರ್ 1, ಮೆಕ್ಯಾನಿಕಲ್ ಡ್ರಾಯಿಂಗ್ |
| 5 ಏಪ್ರಿಲ್ 2027 | ಸೋಮವಾರ | ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI), ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್, ಎಲೆಕ್ಟ್ರಿಸಿಟಿ & ಎಲೆಕ್ಟ್ರಾನಿಕ್ಸ್ |
| 6 ಏಪ್ರಿಲ್ 2027 | ಮಂಗಳವಾರ | ಎಲೆಕ್ಟಿವ್ ಇಂಗ್ಲಿಷ್ |
| 8 ಏಪ್ರಿಲ್ 2027 | ಗುರುವಾರ | ಲೀಗಲ್ ಸ್ಟಡೀಸ್ (Legal Studies) |




