ಪ್ರಯಾಣಿಕರ ಗಮನಕ್ಕೆ: ಡೋರ್ನಹಳ್ಳಿ ರೈಲು ನಿಲ್ದಾಣದಲ್ಲಿ ಈ ರೈಲುಗಳು ತಾತ್ಕಾಲಿಕ ನಿಲುಗಡೆ

ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಸಂತ ಆಂಟನಿಯಸ್ ಬಾಸಿಲಿಕದ ವಾರ್ಷಿಕ ಹಬ್ಬದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಅನುಕೂಲವಾಗುವಂತೆ ಡೋರ್ನಹಳ್ಳಿ ರೈಲು ನಿಲ್ದಾಣದಲ್ಲಿ ಆಯ್ದ ರೈಲುಗಳ ತಾತ್ಕಾಲಿಕ ನಿಲುಗಡೆಗೆ ಅನುಮೋದನೆ ನೀಡಲಾಗಿದೆ. ಈ ತಾತ್ಕಾಲಿಕ ನಿಲ್ದಾಣಗಳು 11.06.2025 ರಿಂದ 14.06.2025 ರವರೆಗೆ ನಾಲ್ಕು ದಿನಗಳ ಕಾಲ ಇರುತ್ತವೆ.

ರೈಲು ನಿಲ್ದಾಣಗಳ ವಿವರಗಳು ಈ ಕೆಳಗಿನಂತಿವೆ:

ರೈಲು ಸಂಖ್ಯೆ. 16225 ಮೈಸೂರು – ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್
ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಬೆಳಿಗ್ಗೆ 10:43 / 10:44 ಗಂಟೆ.

ರೈಲು ಸಂಖ್ಯೆ.16226 ಶಿವಮೊಗ್ಗ ಟೌನ್ – ಮೈಸೂರು ಎಕ್ಸ್‌ಪ್ರೆಸ್
ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಮಧ್ಯಾಹ್ನ 15:49 / 15:50 ಗಂಟೆ.

ರೈಲು ಸಂಖ್ಯೆ. 16222 ಮೈಸೂರು – ತಾಳಗುಪ್ಪ ಎಕ್ಸ್‌ಪ್ರೆಸ್
ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಮಧ್ಯಾಹ್ನ 14:35 / 14:36 ಗಂಟೆ.

ರೈಲು ಸಂಖ್ಯೆ. 16221 ತಾಳಗುಪ್ಪ – ಮೈಸೂರು ಎಕ್ಸ್‌ಪ್ರೆಸ್
ಡೋರ್ನಹಳ್ಳಿಯಲ್ಲಿ ಆಗಮನ/ನಿರ್ಗಮನ ಮಧ್ಯಾಹ್ನ 14:20 / 14:21 ಗಂಟೆ.