BREAKING: ‘ಧರ್ಮಸ್ಥಳ ಕೇಸ್’ಗೆ ಬಿಗ್ ಟ್ವಿಸ್ಟ್: ಟಿ.ಜಯಂತ್ ದೂರಿನನ್ವಯ ‘SIT ತನಿಖೆ’ಗೆ ಸರ್ಕಾರ ಆದೇಶ

ಬೆಂಗಳೂರು: ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್ ದೂರಿನ ಅನ್ವಯದಂತೆ ರಾಜ್ಯ ಸರ್ಕಾರವು 15 ವರ್ಷದ ಶಾಲಾ ಬಾಲಕಿ ಹೂತು ಹಾಕಿದಂತ ಪ್ರಕರಣವನ್ನು ಎಸ್ಐಟಿ ತನಿಖೆಗೆ ಆದೇಶಿಸಿದೆ.

ಹೌದು ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್ ದೂರಿನ ಬಗ್ಗೆ ತನಿಖೆಗೆ ಸರ್ಕಾರ ಆದೇಶಿಸಿದೆ. ಎಸ್ಐಟಿ ತನಿಖೆಗೆ ಆದೇಶಿಸಿ ಡಿಜಿ ಮತ್ತು ಐಜಿಪಿ ಡಾ.ಎಂಎಂ ಸಲೀಂ ಆದೇಶಿಸಿದ್ದಾರೆ.

ನಿನ್ನೆ ಧರ್ಮಸ್ಥಳ ಪೊಲೀಸ್ ಠಾಣೆಗೆ ತೆರಳಿದ್ದಂತ ಸಾಮಾಜಿಕ ಕಾರ್ಯಕರ್ತ ಟಿ.ಜಯಂತ್ ಎಂಬುವರು 15 ವರ್ಷದ ಹಿಂದೆ ಬಾಲಕಿ ಅನುಮಾನಾಸ್ಪದ ಸಾವಾಗಿದೆ ಎಂಬುದಾಗಿ ದೂರು ನೀಡಿದ್ದರು. ಬಾಲಕಿ ಶವವನ್ನು ಪೊಲೀಸ್ ಅಧಿಕಾರಿಯೇ ಮುಂದೆ ನಿಂತು ಹೂತಾಕಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದರು.