ಧರ್ಮಸ್ಥಳಕ್ಕೆ ದತ್ತಾತ್ರೇಯ ಹೊಸಬಾಳೆ ಭೇಟಿ: ಡಾ. ವೀರೇಂದ್ರ ಹೆಗ್ಗಡೆಯವರಿಗೆ ಶುಭಕೋರಿದ RSS ನಾಯಕ | Dattatreya Hosabale

Dattatreya Hosabale visits Dharmasthala RSS leader conveys best wishes to Dr Veerendra Heggade

ಧರ್ಮಸ್ಥಳ : ರಾಷ್ಟ್ರೀಯ ಸ್ವಯಂಸೇವಕ ಸಂಘದ (Rashtriya Swayamsevak Sangh – RSS) ರಾಷ್ಟ್ರೀಯ ಸರಕಾರ್ಯವಾಹರಾದ (General Secretary) ಶ್ರೀ ದತ್ತಾತ್ರೇಯ ಹೊಸಬಾಳೆ (Dattatreya Hosabale) ಅವರು ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಆ ಮೂಲಕ ಮಂಜುನಾಥ ಸ್ವಾಮಿಯ ದರ್ಶನವನ್ನು RSS ನಾಯಕ ದತ್ತಾತ್ರೇಯ ಹೊಸಬಾಳೆ(Dattatreya Hosabale) ಪಡೆದರು.

ಕ್ಷೇತ್ರಕ್ಕೆ ಆಗಮಿಸಿದ ಅವರು ಶ್ರೀ ಮಂಜುನಾಥ ಸ್ವಾಮಿಯ (Shree Manjunatha Swamy) ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದರು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವಾರ್ಷಿಕೋತ್ಸವದ ಶುಭಕೋರಿದ ನಾಯಕರು

ದರ್ಶನದ ಬಳಿಕ ಧರ್ಮಾಧಿಕಾರಿ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ (Dr. D. Veerendra Heggade) ಅವರನ್ನು ಭೇಟಿಯಾದ ದತ್ತಾತ್ರೇಯ ಹೊಸಬಾಳೆ ಅವರು, ಅವರ ಪಟ್ಟಾಭಿಷೇಕದ 59ನೇ ವಾರ್ಷಿಕೋತ್ಸವದ (59th Pattabhisheka Anniversary) ಸಂದರ್ಭದಲ್ಲಿ ಹೆಗ್ಗಡೆಯವರಿಗೆ ಆತ್ಮೀಯವಾಗಿ ಶುಭ ಹಾರೈಸಿದರು. ಕ್ಷೇತ್ರದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಸೇವೆಗಳ ಕುರಿತು ಈ ವೇಳೆ ಚರ್ಚಿಸಲಾಯಿತು.

ಪ್ರಮುಖ ಗಣ್ಯರ ಉಪಸ್ಥಿತಿ

ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಕರ್ನಾಟಕ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ (Prakash), ಶ್ರೇಯಸ್ ಕುಮಾರ್ (Shreyas Kumar) ಧರ್ಮಸ್ಥಳ ಹಾಗೂ ವಿಶ್ವಾಸ್ (Vishwas) ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.