ಶಿವಮೊಗ್ಗ : ಅರಣ್ಯ ಪ್ರದೇಶದಲ್ಲಿ (Forest Area) ಅಕ್ರಮವಾಗಿ ಕಡಿದು ಜಪ್ತಿ ಮಾಡಿದ ಮರಗಳನ್ನು (Seized Wood) ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಅರಣ್ಯ ಇಲಾಖೆಯ (Forest Department) ಮುಖ್ಯ ಕರ್ತವ್ಯವಾಗಿದೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಜಪ್ತಿ ಮಾಡಿದ ಅಪಾರ ಮೌಲ್ಯದ ಮರವೊಂದನ್ನು ಬರೋಬ್ಬರಿ ಎರಡು-ಮೂರು ತಿಂಗಳು ಕಳೆದರೂ ಅರಣ್ಯಾಧಿಕಾರಿಗಳು (Forest Officials) ಸಾಗಿಸದೆ ಸ್ಥಳದಲ್ಲೇ ಬಿಟ್ಟಿರುವುದು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಏನಿದು ಘಟನೆ?
ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ವಲಯ ವ್ಯಾಪ್ತಿಯ (Shiralakoppa Range) ಪುರ ಗ್ರಾಮದಿಂದ ಮುಂದೆ ಬರುವ ಅಮ್ಮಗೊಂಡನಕೊಪ್ಪ ಅರಣ್ಯ ಪ್ರದೇಶದಲ್ಲಿ (Ammagondanakoppa Forest) ಇತ್ತೀಚೆಗೆ ಬೃಹತ್ ಗಾತ್ರದ ಬಾಣಿಗೆ ಮರವನ್ನು (Banige Tree) ಅಕ್ರಮವಾಗಿ ಕಡಿಯಲಾಗಿತ್ತು (Illegal Tree Felling). ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಶಿರಾಳಕೊಪ್ಪ ವಲಯದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಕಡಿದ ಮರವನ್ನು ಜಪ್ತಿ ಮಾಡಿದ್ದರು (Seized).

ಮೂರು ತಿಂಗಳಾದರೂ ನಡೆಯದ ಸಾಗಾಟ!
ಜಪ್ತಿ ಮಾಡಲಾದ ಬಾಣಿಗೆ ಮರದಲ್ಲಿ (Banige Wood Logs) ಐದು ತುಂಡುಗಳಿದ್ದು, ಅವುಗಳಲ್ಲಿ ಮೂರು ಅತ್ಯಂತ ದೊಡ್ಡ ಗಾತ್ರದ ತುಂಡುಗಳಾಗಿವೆ. ಈ ಮರದ ತುಂಡುಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ನಂಬರ್ ನೀಡಿದ್ದಾರಾದರೂ (Timber Numbering), ಮೂರು ತಿಂಗಳು ಕಳೆಯುತ್ತಾ ಬಂದರೂ ಈವರೆಗೆ ಅರಣ್ಯ ಡಿಪೋಗೆ (Forest Depot) ಅಥವಾ ಇಲಾಖೆಯ ಸುಪರ್ದಿಗೆ ತೆಗೆದುಕೊಂಡು ಹೋಗಿಲ್ಲ.
ಸ್ಥಳೀಯರಲ್ಲಿ ಹೆಚ್ಚಿದ ಅನುಮಾನ
ಅರಣ್ಯಾಧಿಕಾರಿಗಳ ಈ ವಿಚಿತ್ರ ನಡೆಗೆ ಸ್ಥಳೀಯ ಗ್ರಾಮಸ್ಥರು (Villagers) ತೀವ್ರ ಆಕ್ರೋಶ ಹಾಗೂ ಅನುಮಾನ ವ್ಯಕ್ತಪಡಿಸಿದ್ದಾರೆ. “ತಿಂಗಳುಗಳ ಕಾಲ ಜಪ್ತಿ ಮಾಡಿದ ಮರವನ್ನು ಕಾಡಿನಲ್ಲೇ ಬಿಟ್ಟಿರುವುದನ್ನು ನೋಡಿದರೆ, ಅಧಿಕಾರಿಗಳು ಇದನ್ನು ಒಳಸಂಚು ನಡೆಸಿ ಯಾರಿಗೋ ಖಾಸಗಿಯಾಗಿ ಮಾರಾಟ ಮಾಡಿರಬಹುದು (Illegal Sale of Timber)” ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.
ಉನ್ನತಾಧಿಕಾರಿಗಳ ಸೂಕ್ತ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ
ಕೂಡಲೇ ಶಿವಮೊಗ್ಗ ವಲಯದ ಸಿಸಿಎಫ್ ಹನುಮಂತರಾಯಪ್ಪ (CCF Hanumantharayappa) ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ಸ್ಥಳೀಯ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ (Negligence of Officials) ಮತ್ತು ಅನುಮಾನಾಸ್ಪದ ನಡೆ ಕುರಿತು ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.




