ಬೆಂಗಳೂರು: ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 4 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ, ದಿನಾಂಕ:19/01/2026 ರಂದು ಮಧ್ಯಾಹ್ನ ಭಾತ್ಮೀದಾರರಿಂದ ಖಚಿತ ಮಾಹಿತಿಯೊಂದು ದೊರೆತಿರುತ್ತದೆ. ಮಾಹಿತಿಯಲ್ಲಿ ಠಾಣಾ ಸರಹದ್ದಿನ ಜಕ್ಕೂರು ರೈಲ್ವೆ ಟ್ರ್ಯಾಕ್ ಬಳಿ ನಾಲ್ವರು ವ್ಯಕ್ತಿಗಳು ನಿಷೇದಿತ ಮಾದಕ ವಸ್ತುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಈ ಮಾಹಿತಿಯನ್ನಾಧರಿಸಿ ಭಾಧಾರರು ತಿಳಿಸಿದ ಸ್ಥಳಕ್ಕೆ ಧಾವಿಸಿ, ನಂತರ ದಾಳಿ ಮಾಡಿ, ಹೊರ ರಾಜ್ಯದ ಇಬ್ಬರು ವ್ಯಕ್ತಿಗಳು ಸೇರಿದಂತೆ, ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ನಾಲ್ವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಹೆಚ್ಚಿನ ಹಣಗಳಿಸುವ ಉದ್ದೇಶದಿಂದ ವಿದೇಶ ಮತ್ತು ಹೊರ ರಾಜ್ಯದಿಂದ ಅಪರಿಚಿತ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಹೈಡೋ ಗಾಂಜಾ, ಎಂ.ಡಿ.ಎಂ.ಎ, ಚರಸ್, ಎಲ್.ಎಸ್.ಡಿ ಸ್ಟ್ರೀಪ್ಗಳು ಹಾಗೂ ಗಾಂಜಾವನ್ನು ಖರೀದಿ ಮಾಡಿಕೊಂಡು ಬಂದು, ಹೆಚ್ಚಿನ ಬೆಲೆಗೆ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದುದ್ದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ಅವರುಗಳ ವಶದಲ್ಲಿದ್ದ ನಿಷೇದಿತ ಮಾದಕ ವಸ್ತುವಾದ 1 ಕೆ.ಜಿ ಹೈಡೋ ಗಾಂಜಾ, 50 ಗ್ರಾಂ ಎಂ.ಡಿ.ಎಂ.ಎ. 500 ಗ್ರಾಂ ಚರಸ್, 8 ಕೆಜಿ ಗಾಂಜಾ, 6 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ನಂತರ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ, ದಿನಾಂಕ:20/01/2026 ರಂದು ನಾಲ್ವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 8 ದಿನಗಳ ಕಾಲ ಪೊಲೀಸ್ ಆಭಿರಕ್ಷೆಗೆ ಪಡೆದುಕೊಳ್ಳಲಾಯಿತು.
ತನಿಖೆಯನ್ನು ಮುಂದುವರೆಸಿ, ಅಭಿರಕ್ಷೆಗೆ ಪಡೆದ ಆರೋಪಿಗಳನ್ನು ಸುದೀರ್ಘವಾಗಿ ವಿಚಾರಣೆ ನಡೆಸಿ, ಅವರುಗಳು ನೀಡಿದ ಮಾಹಿತಿಯ ಮೇರೆಗೆ ದಿನಾಂಕ:20/01/2026 ರಂದು ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಐವರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ಐವರು ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲಾಗಿ, ಅವರುಗಳು ಹೊರರಾಜ್ಯದವರಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾರೆ.
ದಿನಾಂಕ:21/01/2026 ರಂದು ಐವರು ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ, ಜಿ.ಕೆ.ವಿ.ಕೆ ಮೈದಾನದಲ್ಲಿ 2 ಕೆ.ಜಿ ಹೈಡೋ ಗಾಂಜಾ, 1 ಕಾರು, 8 ಮೊಬೈಲ್ ಫೋನ್ಗಳು, 736,000/-ನಗದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
ದಿನಾಂಕ:21/01/2026 ರಂದು ಐವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 7 ದಿನಗಳ ಕಾಲ ಪೊಲೀಸ್’ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು. ಅವರುಗಳು ನೀಡಿದ ಮಾಹಿತಿಯ ಮೇರೆಗೆ ದಿನಾಂಕ:22/01/2026 ರಂದು ಹೊರ ರಾಜ್ಯದ ಓರ್ವ ವ್ಯಕ್ತಿಯನ್ನು ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ 500 ಎಲ್.ಎಸ್.ಡಿ ಸ್ಕ್ರಿಪ್ಟ್, 2 ಕೆ.ಜಿ ಗಾಂಜಾ ಸಮೇತ ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತನ್ನೊಪ್ಪಿಕೊಂಡಿರುತ್ತಾನೆ.
ಈ ಪ್ರಕರಣದ ಹತ್ತು ಆರೋಪಿಗಳ ಬಂಧನದಿಂದ, 03 ಕೆ.ಜಿ ಹೈಡೋ ಗಾಂಜಾ, 50 ಗ್ರಾಂ ಎಂ.ಡಿ.ಎಂ.ಎ, 500 ಗ್ರಾಂ ಚರಸ್, 500 ಎಲ್.ಎಸ್.ಡಿ ಸ್ಟಿಪ್ಸ್ಗಳು, 10 ಕೆಜಿ ಗಾಂಜಾ, 2 ಕಾರುಗಳು, 14 ಮೊಬೈಲ್ ಫೋನ್ಗಳು, 336,000/-ನಗದು ವಶ. ಇವುಗಳ ಒಟ್ಟು ಮೌಲ್ಯ 24,00,00,000/-(ನಾಲ್ಕು ಕೋಟಿ ರೂಪಾಯಿ).
ದಿನಾಂಕ:23/01/2026 ರಂದು ಏಳು ಆರೋಪಿಗಳನ್ನು ದಿನಾಂಕ:27/01/2026 ರಂದು ಮೂವರು ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಹತ್ತು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತದೆ.
ಈ ಕಾರ್ಯಾಚರಣೆಯಲ್ಲಿ ಜಿ.ಕೆ ಮಿಥುನ್ ಕುಮಾರ್ ಐ.ಪಿ.ಎಸ್, ಉಪ-ಪೊಲೀಸ್ ಆಯುಕ್ತರು ಈಶಾನ್ಯ ವಿಭಾಗ, ಮುರುಗೇಂದ್ರಯ್ಯ ಸಹಾಯಕ ಪೊಲೀಸ್ ಆಯುಕ್ತರು ಸಂಪಿಗೆಹಳ್ಳಿ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ, ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಅಂಬರೀಶ್.ಎಂ ರವರ ನೇತೃತ್ವದಲ್ಲಿ, ಇತರೆ ಅಧಿಕಾರಿ ಮತ್ತು ಸಿಬ್ಬಂದಿ ರವರುಗಳು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.




