ಹುಬ್ಬಳ್ಳಿ: 18 ವರ್ಷದ ಯುವತಿಯೊಬ್ಬಳು 50 ವರ್ಷದ ಅಂಕಲ್ ಜೊತೆಗೆ ಮದುವೆಯಾಗಿದ್ದಂತ ಅಪರೂಪದ ಲವ್ ಮ್ಯಾರೇಜ್ ಹುಬ್ಬಳ್ಳಿಯಲ್ಲಿ ನಡೆತಿತ್ತು. ಇದೀಗ ಈ ಲವ್ ಕಹಾನಿಗೆ ಬಿಗ್ ಟ್ವಿಸ್ಟ್ ಸಿಕ್ಕಿತ್ತು, ಅಂಕಲ್ ಅರೆಸ್ಟ್ ಆಗಿದದಾರೆ.
ಅಜ್ಜಿ ಮನೆಗೆ ತೆರಳುವುದಾಗಿ ಹೋಗಿದ್ದಂತ 18 ವರ್ಷದ ಕರೀಷ್ಮಾ, ನಾಪತ್ತೆಯಾಗಿದ್ದಳು. ಯುವತಿಯನ್ನು ಮದುವೆಯಾಗಿರುವುದಾಗಿ 50 ವರ್ಷದ ಸೆಕ್ಯೂರಿಟಿ ಪ್ರಕಾಶ್ ವಾಟ್ಸ್ ಆಪ್ ಸ್ಟೇಟಸ್ ಅನ್ನು ಕೆಲ ದಿನಹಳ ಹಿಂದೆ ಹಾಕಿದ್ದರು.
ಇತ್ತ ಯುವತಿಯ ಪೋಷಕರು ಮಗಳು ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಯುವತಿ ಕರೀಷ್ಮಾ ಕರೆತಂದು ವಿಚಾರಿಸಿದಾಗ ರಿವರ್ಸ್ ಹೊಡೆದಿದ್ದಾಳೆ. ಪ್ರಕಾಶ್ ನನ್ನನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾಗಿ ಗಂಭೀರ ಆರೋಪ ಮಾಡಿದ್ದಾಳೆ.
ಇದಷ್ಟೇ ಅಲ್ಲದೇ ಪ್ರಕಾಶ್ ವಿರುದ್ಧ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನಲ್ಲಿ ಪ್ರಕಾಶ್ ಒಂದು ವರ್ಷದಿಂದ ನನ್ನ ಹಿಂದೆ ಬಿದ್ದಿದ್ದರು. ಪ್ರೀತಿ ಮಾಡುವಂತೆ ಪೀಡಿಸುತ್ತಿದ್ದರು ಅಂತ ಕರೀಷ್ಮಾ ಆರೋಪಿಸಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ಅಂಕಲ್ ಪ್ರಕಾಶ್ ನನ್ನು ಬಂಧಿಸಿದ್ದಾರೆ.




