ಬೆಂಗಳೂರು: ಕರ್ನಾಟಕದಲ್ಲಿ ವರ್ಷದಿಂದ ವರ್ಷಕ್ಕೆ ಬಾಣಂತಿಯರ ಸಾವಿನ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಇಲ್ಲಿಯವರೆಗೂ ಏರಿಕೆಯಾಗಿಲ್ಲ. ಕಡಿಮೆಯಾಗುತ್ತಲೇ ಇದೆ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟ ಪಡಿಸಿದ್ದಾರೆ.
ಈ ಬಗ್ಗೆ ಅಂಕಿ ಅಂಶ ಸಹಿತ ಮಾಹಿತಿ ನೀಡಿರುವಂತ ಅವರು, ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಘಟನೆಯ ನಂತ್ರ, ಆರೋಗ್ಯ ಇಲಾಖೆಯು ಎಚ್ಚೆತ್ತುಕೊಂಡಿದೆ. ತಾಯಿ ಮರಣ ಪ್ರಮಾಣ ನಿಯಂತ್ರಣಕ್ಕೆ ಎಲ್ಲಾ ಕ್ರಮ ವಹಿಸಿದೆ ಎಂದು ತಿಳಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ಕರ್ನಾಟಕದಲ್ಲಿ ತಾಯಿ ಮರಣ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗುತ್ತಿದೆ. 2019-20ರಲ್ಲಿ 662 ಬಾಣಂತಿಯರು ಸಾವನ್ನಪ್ಪಿದ್ದಾರೆ. ಇದರ ಶೇಕಡವಾರು ಪ್ರಮಾಣ 74% ಆಗಿತ್ತು. 2020-21ರಲ್ಲಿ 714 ಬಾಣಂತಿಯರು ಸಾವನ್ನಪ್ಪಿದ ಕಾರಣ ಶೇ.84ಕ್ಕೆ ಪ್ರಮಾಣ ಏರಿಕೆಯಾಗಿತ್ತು. ಆ ಬಳಿಕ 2021-22ರಲ್ಲಿ 594 ತಾಯಿ ಮರಣ, 2022-23ರಲ್ಲಿ 527 ಬಾಣಂತಿಯರು ಸಾವು, 2023-24ರಲ್ಲಿ 518 ತಾಯಿ ಮರಣ ಸಂಭವಿಸಿದೆ. 2024-25ರ ನವೆಂಬರ್ ವರೆಗೆ 348 ಬಾಣಂತಿಯರು ಸಾವನ್ನಪ್ಪಿದ್ದೂ, ಇದರ ಪ್ರಮಾಣ ಶೇ.64 ಆಗಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.




