ನವದೆಹಲಿ: ನಮ್ಮ ಸೇನಾ ನೆಲೆಗಳನ್ನು ಗುರಿಯಾಗಿಸಲು ಪಾಕಿಸ್ತಾನವು ಕಳೆದ ರಾತ್ರಿ ಲೇಹ್ ನಿಂದ ಸರ್ ಕ್ರೀಕ್ ವರೆಗೆ 36 ಸ್ಥಳಗಳಲ್ಲಿ 300-400 ಡ್ರೋನ್ ಗಳನ್ನು ಕಳುಹಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಂತ ಕೇಂದ್ರ ವಿದೇಶಾಂಗ ಸಚಿವಾಲಯವು, ಭಾರತದ ಮೇಲೆ ಟರ್ಕಿ ಡ್ರೋನ್ ಬಳಸಿ ಪಾಕಿಸ್ತಾನ ನಿನ್ನೆ ದಾಳಿ ನಡೆಸಿದೆ. ಈ ದಾಳಿಯನ್ನು ಭಾರತೀಯ ಸೇನೆ ಹಿಮ್ಮೆಟ್ಟಿಸಿದೆ. 36 ಸ್ಥಳಗಳಲ್ಲಿ 300 ರಿಂದ 400 ಡ್ರೋನ್ ಮೂಲಕ ದಾಳಿ ನಡೆಸಲು ಪಾಕಿಸ್ತಾನ ನಡೆಸಿದಂತ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ ಎಂದಿದೆ.




