ಬೆಂಗಳೂರು: ಕೇಂದ್ರ ಸರ್ಕಾರವು ಪಹಲ್ಗಾಮ್ ದಾಳಿಯ ಉದ್ವಿಗ್ನತೆಯ ನಂತ್ರ ಯುದ್ಧ ಸನ್ನದ್ಧಿನ ಮಾಕ್ ಡ್ರಿಲ್ ನಡೆಸಲು ಆದೇಶಿಸಿದೆ. ಈ ಹಿನ್ನಲೆಯಲ್ಲಿ ನಾಳೆ ಕರ್ನಾಟಕದ ಎರಡು ಕಡೆ ಯುದ್ಧದ ಸೈರನ್ ಮೊಳಗಳಿದೆ. ಅದು ಎಲ್ಲಿ ಅಂತ ಮುಂದೆ ಓದಿ.
ಪಹಲ್ಗಾಮ್ ನಲ್ಲಿ ಉಗ್ರರು 26 ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈದ ನಂತ್ರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡ ಆವರಿಸಿದೆ. ಈ ಕಾರಣದಿಂದ ದೇಶಾದ್ಯಂತ ನಾಳೆ 244 ಸ್ಥಳಗಳಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ.
ನಾಳೆ ಕರ್ನಾಟಕದ ಬೆಂಗಳೂರು, ಕಾರವಾರ ಮತ್ತು ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಶಕ್ತಿ ನಗರದಲ್ಲಿ ಸಂಜೆ 4 ಗಂಟೆಗೆ ಮಾಕ್ ಡ್ರಿಲ್ ನಡೆಯಲಿದೆ. ಈ ಮೂಲಕ ಬೆಂಗಳೂರು ಮತ್ತು ರಾಯಚೂರಲ್ಲಿ ಯುದ್ಧದ ಸೈರನ್ ಮೊಳಗಲಿದೆ.
ಅಂದಹಾಗೇ ಮಾಕ್ ಡ್ರಿಲ್ ಎಂಬುದು ಒಂದು ಕಾಲ್ಪನಿಕ ತುರ್ತು ಪರಿಸ್ಥಿತಿಯನ್ನು ಸೃಷ್ಠಿಸುವುದಾಗಿದೆ. ಸರ್ಕಾರ, ಭದ್ರತಾ ಸಿಬ್ಬಂದಿ, ಸಾರ್ವಜನಿಕರ ಸಿದ್ಧತೆ ಪರೀಕ್ಷಿಸುವಂತ ಅಭ್ಯಾಸವಾಗಿದ್ದು, ಆದರೇ ನೈಜ ಘಟನೆಯಂತೆಯೇ ಯಾವುದೇ ಹಾನಿಯಾಗದಂತೆ ನಡೆಸಲಾಗುತ್ತದೆ.
ಬರೋಬ್ಬರಿ 54 ವರ್ಷದ ಬಳಿಕ ಭಾರತದಲ್ಲಿ ಮಾಕ್ ಡ್ರಿಲ್ ನಡೆಸಲಾಗುತ್ತಿದೆ. ಪಹಲ್ಗಾಮ್ ದಾಳಿಯ ಪ್ರತೀಕಾರಕ್ಕೆ ಭಾರತ ಯುದ್ಧ ಸನ್ನದ್ಧತೆಯನ್ನು ನಾಳೆ 244 ಸಿವಿಲ್ ಡಿಫೆನ್ಸ್ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್ ನಡೆಸುವ ಮೂಲಕ ಪ್ರದರ್ಶನ ಮಾಡಲಿದೆ.




