ಬೆಂಗಳೂರು: ಇಂದು ಕನ್ನಡದ ಖ್ಯಾತ ನಟ, ರಂಗ ಕರ್ಮಿ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಟ ಯಶವಂತ ಸರದೇಶಪಾಂಡೆ ಅವರು ಬೆಂಗಳೂರಿನ ಪೋರ್ಟಿಸ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಕನ್ನಡ ರಂಗಭೂಮಿ ನಟರಾಗಿ ಹೆಚ್ಚು ಜನಪ್ರಿಯರಾಗಿದ್ದಂತ ಅವರು, ರಾಜ್ಯಾಧ್ಯಂತ ಇವರು ನಟಿಸಿ ನಿರ್ದೇಶಿಸಿರುವಂತ ಆಲ್ ದಿ ಬೆಸ್ಟ್ ನಾಟಕ ಅಭೂತಪೂರ್ವ ಯಶಸ್ಸನ್ನು ಕಂಡಿತ್ತು.
ಕಿರುತೆರೆ, ಚಲನಚಿತ್ರಗಳಲ್ಲಿಯೂ ಪಾತ್ರ ನಿರ್ವಹಿಸುತ್ತಿದ್ದರು. ಇವರ ಪತ್ನಿ ಮಾಲತಿ ಕೂಡ ರಂಗಭೂಮಿ ಮತ್ತು ಕಿರುತೆರೆಯ ಜನಪ್ರಿಯ ಕಲಾವಿಧೆಯಾಗಿದ್ದಾರೆ.
ಯಶವಂತ ಸರದೇಶಪಾಂಡೆಯವರು ಜೂನ್.13, 1965ರಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಎಂಬ ಹಳ್ಳಿಯಲ್ಲಿ ಜನಿಸಿದ್ದರು. ಇವರ ತಂದೆ ಶ್ರೀಧರರಾವ್ ಗೋಪಾಲರಾವ್ ಸರದೇಶಪಾಂಡೆ, ತಾಯಿ ಕಲ್ಪನಾದೇವಿ ಆಗಿದ್ದಾರೆ.




