ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಸುರಿದಂತ ಮುಂಗಾರು ಪೂರ್ವ ಮೊದಲ ಮಳೆಯೇ ಮಹಿಳೆಯೊಬ್ಬರನ್ನು ಬಲಿ ಪಡೆದಿದೆ. ಭಾರೀ ಮಳೆ ಸಹಿತ ಬಡಿದ ಸಿಡಿಲಿಗೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರಿನ ಕುರುಬರಹಳ್ಳಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಂತ ವೇಳೆಯಲ್ಲೇ ಭಾರೀ ಮಳೆಯಾಗಿದೆ. ಹೊಲದಲ್ಲಿ ಶುಂಠಿ ಕೆಲಸ ಮಾಡುತ್ತಿದ್ದಂತ ವೇಳೆಯಲ್ಲಿ ಸಿಡಿಲು ಬಡಿದು ವೃದ್ಧೆ ನಾಗಮ್ಮ(65) ಸಾವನ್ನಪ್ಪಿದ್ದಾರೆ.
ಬೇಲೂರು ತಾಲ್ಲೂಕಿನ ಹೆಬ್ಬಾಳ ತಿಮ್ಮನಹಳ್ಳಿಯ ನಾಗಮ್ಮ ಮತ್ತು ಮಗಳು ಶುಂಠಿ ಬಿತ್ತನೆ ವೇಳೆಯಲ್ಲಿ ಈ ದುರಂತ ಸಂಭವಿಸಿದೆ. ಹೊಲದಲ್ಲಿ 12 ಜನರು ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.




