ಬಿಜಾಪುರ: ಛತ್ತೀಸ್ಗಢದ ಬಿಜಾಪುರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಾವೋವಾದಿಗಳು ಅಡಗಿಸಿಟ್ಟಿದ್ದ 136 ಬ್ಯಾರೆಲ್ ಗ್ರೆನೇಡ್ ಲಾಂಚರ್ (BGL) ಶೆಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಾಮೇಡ್ ಮತ್ತು ಗಂಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುಪ್ತಚರ ಮಾಹಿತಿ ಆಧರಿಸಿ ಶೋಧ ಕಾರ್ಯಾಚರಣೆ ನಡೆಸಲಾಯಿತು. DRG, CRPF, CoBRA ಬೆಟಾಲಿಯನ್ ಹಾಗೂ K-9 ಶ್ವಾನದಳ ಪಾಲ್ಗೊಂಡಿದ್ದವು.

ಪಾಮೇಡ್ನ ತುಮ್ರೆಲ್-ಸಿಂಗಂಪಲ್ಲಿ ಅರಣ್ಯದಲ್ಲಿ 103 BGL ಶೆಲ್ಗಳು ಪತ್ತೆಯಾಗಿವೆ. ಗಂಗಲೂರು ವ್ಯಾಪ್ತಿಯ ಎರಡು ಅಡಗುದಾಣಗಳಿಂದ 33 ಶೆಲ್ಗಳು ಹಾಗೂ ಸುಮಾರು 1,400 ಅಡಿ ಕಾರ್ಡೆಕ್ಸ್ ವೈರ್ ಸೇರಿದಂತೆ ಇತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



