ಜಮ್ಮು-ಕಾಶ್ಮೀರದದಲ್ಲಿ ಕಂದಕಕ್ಕೆ ಉರುಳಿ ಬಿದ್ದ ಸೇನಾ ವಾಹನ: ಐವರು ಯೋಧರು ಹುತಾತ್ಮ

ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಪೂಂಚ್ ಜಿಲ್ಲೆಯ ಮೆಂಧಾರ್ನ ಬಾಲ್ನೋಯ್ ಪ್ರದೇಶದಲ್ಲಿ ಮಂಗಳವಾರ ಸೇನಾ ವಾಹನವೊಂದು ನಿಯಂತ್ರಣ ತಪ್ಪಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ 8 ಸೈನಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ಐವರು ಯೋಧರು ಹುತಾತ್ಮರಾಗಿರುವುದಾಗಿ ತಿಳಿದು ಬಂದಿದೆ.

11 ಮದ್ರಾಸ್ ಲೈಟ್ ಇನ್ಫೆಂಟ್ರಿ (11 ಎಂಎಲ್ಐ) ಗೆ ಸೇರಿದ ವಾಹನವು ನೀಲಂ ಪ್ರಧಾನ ಕಚೇರಿಯಿಂದ ಬಾಲ್ನೋಯ್ ಘೋರಾ ಪೋಸ್ಟ್ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ವರದಿಗಳ ಪ್ರಕಾರ, ವಾಹನವು ತನ್ನ ಗಮ್ಯಸ್ಥಾನದ ಬಳಿ ಸುಮಾರು 350 ಅಡಿ ಕಡಿದಾದ ಕಮರಿಗೆ ಬಿದ್ದಿದೆ.

ಮಾಹಿತಿ ಪಡೆದ ನಂತರ, 11 ಎಂಎಲ್ಐನ ತ್ವರಿತ ಪ್ರತಿಕ್ರಿಯೆ ತಂಡವು ರಕ್ಷಣಾ ಕಾರ್ಯಾಚರಣೆ ನಡೆಸಲು ಸ್ಥಳಕ್ಕೆ ಧಾವಿಸಿತು. ಗಾಯಗೊಂಡ ಸಿಬ್ಬಂದಿಗೆ ತಕ್ಷಣದ ವೈದ್ಯಕೀಯ ನೆರವು ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ.

ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ನಡೆದ ಇದೇ ರೀತಿಯ ಅಪಘಾತದಲ್ಲಿ, ವಾಹನವು ರಸ್ತೆಯಿಂದ ಜಾರಿ ಕಮರಿಗೆ ಬಿದ್ದ ಪರಿಣಾಮ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದರು. ಇನ್ನೊಬ್ಬರು ಗಾಯಗೊಂಡಿದ್ದರು.

ನವೆಂಬರ್ 4 ರಂದು ಕಲಕೋಟೆಯ ಬಡೋಗ್ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ನಾಯಕ್ ಬದ್ರಿ ಲಾಲ್ ಮತ್ತು ಸಿಪಾಯಿ ಜೈ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಾಲ್ ಕೊನೆಯುಸಿರೆಳೆದಿದ್ದಾರೆ.

ನವೆಂಬರ್ 2 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಕಾರು ಗುಡ್ಡಗಾಡು ರಸ್ತೆಯಿಂದ ಜಾರಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಮಹಿಳೆ ಮತ್ತು ಆಕೆಯ 10 ತಿಂಗಳ ಮಗ ಸೇರಿದಂತೆ ಮೂವರು ಹುತಾತ್ಮರಾಗಿದ್ದರು. ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದರು.