ಬೆಂಗಳೂರಿಗರಿಗೆ ಗುಡ್‌ನ್ಯೂಸ್‌; ಎ-ಖಾತೆಗೆ ಭರ್ಜರಿ ಡಿಸ್ಕೌಂಟ್ ಆಫರ್ – ಗೈಡೆನ್ಸ್ ವ್ಯಾಲ್ಯೂ ಭಾರೀ ಇಳಿಕೆ

ಬೆಂಗಳೂರು: ಸಿಲಿಕಾನ್‌ ಸಿಟಿಯ (Bengaluru) ಆಸ್ತಿ ಮಾಲೀಕರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ‘ನಮ್ಮ ಖಾತೆ ನಮ್ಮ ಹಕ್ಕು’ ಅಭಿಯಾನದ ಮೂಲಕ ಆಸ್ತಿ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬೃಹತ್ ಯೋಜನೆಗೆ ಚಾಲನೆ ನೀಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ 5 ನಗರ ಪಾಲಿಕೆಗಳ ಆಸ್ತಿ ಮಾಲೀಕರಿಗೆ ಭೂ ದಾಖಲೆಗಳನ್ನು ಸುರಕ್ಷತೆ, ವಂಚನೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಇಡೀ ದೇಶದಲ್ಲಿಯೇ ಮೊದಲಬಾರಿಗೆ ಇ-ಖಾತಾವನ್ನು ಪರಿಚಿಯಿಸಿದ ಕೀರ್ತಿ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ.

ಉಪ ಮುಖ್ಯ ಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ರವರ ದೂರದೃಷ್ಠಿ ನಾಯಕತ್ವದಲ್ಲಿ, ನಗರದ ನಾಗರಿಕರಿಗಾಗಿ ಪರಿವರ್ತನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಜೊತೆಗೆ ಬೆಂಗಳೂರು ನಗರಕ್ಕೆ 6ನೇ ಗ್ಯಾರಂಟಿ ಘೋಷಿಸಲಾಗುತ್ತಿದೆ. ಅದುವೇ ಐತಿಹಾಸಿಕ “ಭೂ ಗ್ಯಾರಂಟಿ” ಯೋಜನೆ. ಈ ಯೋಜನೆಯ ಮೂಲಕ ಬೆಂಗಳೂರಿನ ಆಸ್ತಿ ಆಡಳಿತ ವ್ಯವಸ್ಥೆಯಲ್ಲಿ ಮಹತ್ವದ ಪರಿವರ್ತನೆ ತರಲಾಗಿದೆ.

ಇದೇ ವೇಳೆ 16.05.2026ರಿಂದ ಪ್ರತಿ ಶನಿವಾರ ಬೆಂಗಳೂರಿನ 50 ಸ್ಥಳಗಳಲ್ಲಿ ನಗರಾದ್ಯಂತ “ನನ್ನ ಖಾತಾ -ನನ್ನ ಹಕ್ಕು ಅಭಿಯಾನ(ಇ-ಖಾತಾ ಸಿಟಿಜನ್ ಓಪನ್ ಹೌಸ್) ಕಾರ್ಯಕ್ರಮವನ್ನು ಆರಂಭಿಸುತ್ತಿದೆ. ಈ ಕಾರ್ಯಕ್ರಮದ ಮೂಲಕ ಇ-ಖಾತಾ ಸೇವೆಗಳ ಕುರಿತ ನಾಗರಿಕರ ಅಹವಾಲುಗಳಿಗೆ ತಕ್ಷಣದ ಪರಿಹಾರ ಹಾಗೂ ಸ್ಥಳದಲ್ಲೇ ಸೇವಾ ಸೌಲಭ್ಯ ನೀಡಲಾಗುವುದು.

1. “ಭೂ ಗ್ಯಾರಂಟಿ” ಯೋಜನೆ ಘೋಷಣೆ: ಬೆಂಗಳೂರಿನ ನಾಗರಿಕರಿಗೆ ಸುರಕ್ಷಿತ ಡಿಜಿಟಲ್ ಆಸ್ತಿ ಹಕ್ಕು:

ಬೆಂಗಳೂರು ಇ-ಖಾತಾ ವೇದಿಕೆ ಇಂದು ಭಾರತದ ಅತಿದೊಡ್ಡ ಸಮಗ್ರ ಡಿಜಿಟಲ್ ನಗರ ಆಸ್ತಿ ದಾಖಲೆ ವ್ಯವಸ್ಥೆಯಾಗಿ ರೂಪುಗೊಂಡಿದ್ದು, 23 ಲಕ್ಷಕ್ಕೂ ಅಧಿಕ ಆಸ್ತಿ ದಾಖಲೆಗಳನ್ನು ಆನ್‌ಲೈನ್ ಮೂಲಕ ನೇರವಾಗಿ ನಾಗರಿಕರ ಕೈಗೆ ತಲುಪಿಸಿದೆ. 7000ಕ್ಕೂ ಹೆಚ್ಚು ಹಸ್ತಚಾಲಿತ ರಿಜಿಸ್ಟರ್‌ಗಳಲ್ಲಿ ನಿರ್ವಹಿಸಲಾಗುತ್ತಿದ್ದ ಹಳೆಯ, ಅಸ್ಪಷ್ಟ ಹಾಗೂ ಕೈಪಿಡಿ ವ್ಯವಸ್ಥೆಯನ್ನು https://BBMPeAasthi.karnataka.gov.in ರಲ್ಲಿ ಪಾರದರ್ಶಕ, ಸುರಕ್ಷಿತ ಹಾಗೂ ನಾಗರಿಕ ಕೇಂದ್ರಿತ ಡಿಜಿಟಲ್ ಆಡಳಿತ ವ್ಯವಸ್ಥೆಯಾಗಿ ಪರಿವರ್ತಿಸಲಾಗಿದೆ.

ಆಸ್ತಿ ಮಾಲೀಕತ್ವ ದಾಖಲೆಗಳು ಆರ್ಥಿಕ ಭದ್ರತೆ, ಆಸ್ತಿ ರಕ್ಷಣೆ ಹಾಗೂ ಕುಟುಂಬದ ಸಂಪತ್ತಿನ ಸುರಕ್ಷತೆಗೆ ಮೂಲಾಧಾರವಾಗಿವೆ. “ಭೂ ಗ್ಯಾರಂಟಿ” ಮೂಲಕ ಬೆಂಗಳೂರಿನ ಪ್ರತಿಯೊಬ್ಬ ನೈಜ ಆಸ್ತಿ ಮಾಲೀಕರಿಗೂ ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಎಲ್ಲೆಡೆಯಿಂದ ಲಭ್ಯವಾಗುವ ಡಿಜಿಟಲ್ ಆಸ್ತಿ ದಾಖಲೆಗಳನ್ನು ಒದಗಿಸಲಾಗಿದೆ.

ನಾಗರಿಕರು ಈಗ:

 ಆನ್‌ಲೈನ್ ಮೂಲಕ ಇ-ಖಾತಾ ಪಡೆಯಬಹುದು ಹಾಗೂ ಡೌನ್‌ಲೋಡ್ ಮಾಡಬಹುದು
 ನೋಂದಣಿಯ ನಂತರ ಆಧಾರ್ ಆಧಾರಿತ ಸ್ವಯಂ ಮ್ಯೂಟೇಶನ್ ಪಡೆಯಬಹುದು
 ಆಸ್ತಿ ತೆರಿಗೆ, ಬೆಸ್ಕಾಂ, ಜಲಮಂಡಳಿ, ಕಟ್ಟಡ ಯೋಜನೆ ಅನುಮೋದನೆ ಹಾಗೂ ಉಪ-ನೋಂದಣಿ ಕಚೇರಿ ಸೇವೆಗಳೊಂದಿಗೆ ಸಂಯೋಜಿತ ಸೇವೆಗಳನ್ನು ಪಡೆಯಬಹುದು

ಈ ವೇದಿಕೆ ಡ್ರೋನ್ ಸರ್ವೇ ಆಧಾರಿತ ಉIS ಮ್ಯಾಪಿಂಗ್ ಹಾಗೂ ಬ್ಲಾಕ್‌ಚೈನ್ ಸುರಕ್ಷಿತ ಕಾರ್ಯವಿಧಾನಗಳನ್ನು ಒಳಗೊಂಡಿದ್ದು, ಪಾರದರ್ಶಕತೆ, ಪರಿಶೀಲನೆ ಹಾಗೂ ವಂಚನೆ ತಡೆಗೆ ಬಲ ನೀಡುತ್ತದೆ.

ಈ ಸುಧಾರಣೆ ಸುಮಾರು 1.4 ಕೋಟಿ ಬೆಂಗಳೂರಿನ ನಾಗರಿಕರಿಗೆ ಲಾಭಕರವಾಗಿದ್ದು, ಅನಗತ್ಯ ಕಚೇರಿ ಭೇಟಿಗಳನ್ನು ಕಡಿಮೆ ಮಾಡುವುದು, ವಿಳಂಬ ನಿವಾರಣೆ ಹಾಗೂ ಫೇಸ್ ಲೆಸ್ ಸೇವೆಗಳ ಮೂಲಕ ಭಾರತದ ಅತ್ಯಂತ ಮಹತ್ವದ ನಗರಾಡಳಿತ ಪರಿವರ್ತನೆಗಳಲ್ಲಿ ಒಂದಾಗಿದೆ.

ಮನೆ-ಮನೆಗೆ ಇ-ಖಾತಾಗಳ ಹಂಚಿಕೆ:

ಐತಿಹಾಸಿಕ ಏಕಕಾಲಿಕ ನಾಗರಿಕ ತಲುಪುವಿಕೆ ಕಾರ್ಯಕ್ರಮವಾಗಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಉಃಂ) ಹಾಗೂ ಐದು ಬೆಂಗಳೂರು ನಗರ ಪಾಲಿಕೆಗಳು ಶೀಘ್ರದಲ್ಲಿಯೇ 23 ಲಕ್ಷಕ್ಕೂ ಅಧಿಕ ಆಸ್ತಿಗಳ ಮುದ್ರಿತ ಇ-ಖಾತಾಗಳ ಮನೆ-ಮನೆ ವಿತರಣೆಯನ್ನು ಪ್ರಾರಂಭಿಸಲಿವೆ.

ಬೆAಗಳೂರು ಇ-ಖಾತಾ ಯೋಜನೆಗೆ ಡಿಜಿಟಲ್ ಆಸ್ತಿ ಆಡಳಿತ ಸುಧಾರಣೆಯಲ್ಲಿ ಕರ್ನಾಟಕದ ಮುಂಚೂಣಿ ಕಾರ್ಯಕ್ಕಾಗಿ ರಾಷ್ಟ್ರೀಯ ಇ-ಗವರ್ಣನ್ಸ್ ಪ್ರಶಸ್ತಿ(ಗೋಲ್ಡ್) 2025 ಲಭಿಸಿದೆ.

2. ಪ್ರತಿ ಶನಿವಾರ 5 ನಗರ ಪಾಲಿಕೆಗಳ 50 ಸ್ಥಳಗಳಲ್ಲಿ “ನನ್ನ ಖಾತಾ ನನ್ನ ಹಕ್ಕು ಅಭಿಯಾನ”[ಇ-ಖಾತಾ ಸಿಟಿಜನ್ ಓಪನ್ ಹೌಸ್]:

ನಾಗರಿಕ ಸೇವಾ ಸೌಲಭ್ಯ ಹಾಗೂ ಅಹವಾಲು ನಿವಾರಣೆಯನ್ನು ಮತ್ತಷ್ಟು ಬಲಪಡಿಸಲು, ಬೆಂಗಳೂರಿನಾದ್ಯAತ ಪ್ರತಿ ಶನಿವಾರ 50 ಸ್ಥಳಗಳಲ್ಲಿ “ನನ್ನ ಖಾತಾ ನನ್ನ ಹಕ್ಕು ಅಭಿಯಾನ[ಇ-ಖಾತಾ ಸಿಟಿಜನ್ ಓಪನ್ ಹೌಸ್]” ಕಾರ್ಯಕ್ರಮ ನಡೆಯಲಿದೆ. ಇದೇ 16-05-206 ರಂದು ಅಧಿಕೃತವಾಗಿ ಚಾಲನೆ ಸಿಗಲಿದ್ದು, ಲಿಂಕ್ ನಲ್ಲಿರುವ https://updates.bbmpgov.in/v1/api/file/920953313893-openhousevenues.pdf ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ.

ಪ್ರತಿ ಶನಿವಾರ ಸುಮಾರು 5000 ನಾಗರಿಕರಿಗೆ ನೇರ ಸಹಾಯ ದೊರೆಯಲಿದ್ದು, ಕೆಳಗಿನ ಸೇವೆಗಳಿಗೆ ವಿಶೇಷ ಸೌಲಭ್ಯ ಒದಗಿಸಲಾಗುತ್ತದೆ:

1. ಅಂತಿಮ ಇ-ಖಾತಾ
2. ಹೊಸ ಇ-ಖಾತಾ
3. ಬಿ ಖಾತಾ ದಿಂದ ಎ ಖಾತಾ

ಪ್ರಥಮ ಆದ್ಯತೆ:

 ಬಾಕಿ ಇರುವ ನಾಗರಿಕ ಅರ್ಜಿಗಳು ಹಾಗೂ ಅಹವಾಲುಗಳು
 ಹೊಸ ಅರ್ಜಿದಾರರು ಹಾಗೂ ವಾಕ್-ಇನ್ ನಾಗರಿಕರಿಗೂ ಸಹ ಸಂಪೂರ್ಣ ಸೌಲಭ್ಯ ನೀಡಲಾಗುವುದು.

ಜಿಬಿಎ ಮತ್ತು ಬೆಂಗಳೂರು ನಗರ ಪಾಲಿಕೆಗಳು ಬಾಕಿ ಇರುವ ಅರ್ಜಿಗಳು ಅಥವಾ ಕುಂದುಕೊರತೆಗಳನ್ನು ಹೊಂದಿರುವ ಎಲ್ಲಾ ನಾಗರಿಕರನ್ನು ಆಹ್ವಾನಿಸಲು ಎಸ್‌ಎಂಎಸ್, ಫೋನ್ ಕರೆಗಳು ಮತ್ತು ಸಾರ್ವಜನಿಕ ಸಂವಹನದ ಮೂಲಕ ವ್ಯಾಪಕ ನಾಗರಿಕ ಸಂಪರ್ಕವನ್ನು ಕೈಗೊಳ್ಳುತ್ತವೆ. ವಾಕ್-ಇನ್ ನಾಗರಿಕರಿಗೂ ಸಹ ಅವಕಾಶ ನೀಡಲಾಗುವುದು.

ಪ್ರತಿ ಖಾತಾ ಅಭಿಯಾನ ಕೇಂದ್ರದಲ್ಲಿ ಸುಮಾರು 100 ನಾಗರಿಕರಿಗೆ ಸೇವೆ ಒದಗಿಸುವ ವ್ಯವಸ್ಥೆ ಇರುತ್ತದೆ:

 ವಿಶೇಷ ಸೇವಾ ಕೌಂಟರ್‌ಗಳು
 ನಾಗರಿಕ ಸಹಾಯ ಕೇಂದ್ರಗಳು
 ಆಸನ ಹಾಗೂ ಸರತಿ ಸಾಲು
 ಇಂಟರ್ನೆಟ್ ಸೌಲಭ್ಯ ಹೊಂದಿದ ಕಂಪ್ಯೂಟರ್‌ಗಳು
 ಪ್ರಿಂಟರ್ ಹಾಗೂ ಸ್ಕ್ಯಾನರ್‌ಗಳು
 ಪಾವತಿ ನೆರವು ವ್ಯವಸ್ಥೆ

ಸಹಾಯಕ ಕಂದಾಯ ಅಧಿಕಾರಿಗಳು(ಂಖಔs), ಕಂದಾಯ ನಿರೀಕ್ಷಕರು(ಖIs), ತಾಂತ್ರಿಕ ತಂಡಗಳು ಮತ್ತು ನಾಗರಿಕ ಸೌಲಭ್ಯ ಸಿಬ್ಬಂದಿ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ ಮತ್ತು ಸ್ಥಳದಲ್ಲೇ ವಿಲೇವಾರಿ ಮತ್ತು ಪರಿಹಾರ ಒದಗಿಸಲಿದ್ದಾರೆ.

ನಾಗರಿಕರು ತಮ್ಮ ಪ್ರಕರಣಗಳ ತ್ವರಿತ ಪರಿಹಾರವನ್ನು ಸಕ್ರಿಯಗೊಳಿಸಲು ಎಲ್ಲಾ ಸಂಬAಧಿತ ಆಸ್ತಿ ದಾಖಲೆಗಳು, ಗುರುತಿನ ಪುರಾವೆ ಮತ್ತು ಅರ್ಜಿ ವಿವರಗಳೊಂದಿಗೆ ಖಾತಾ ಆಂದೋಲನ ಸ್ಥಳಗಳಿಗೆ ಹಾಜರಾಗಲು ವಿನಂತಿಸಲಾಗಿದೆ.

ಈ ಪ್ರಮುಖ ನಾಗರಿಕ ಸಂಪರ್ಕ ಉಪಕ್ರಮದ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಸಾರ್ವತ್ರಿಕ ರಜಾ ದಿನಗಳಾದ 2ನೇ ಮತ್ತು 4ನೇ ಶನಿವಾರದಂದು “ನನ್ನ ಖಾತಾ ನನ್ನ ಹಕ್ಕು ಅಭಿಯಾನ”(ಓಪನ್ ಹೌಸ್)ಗಳಿಗೆ ಹಾಜರಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಈ ಕೆಳಗಿನ ಸೌಲಭ್ಯಗಳು ಸಿಗಲಿವೆ:

 ಇನ್ನೊಂದು ಕೆಲಸದ ದಿನದಂದು ಪರ್ಯಾಯ ಸಾಪ್ತಾಹಿಕ ರಜೆ ಅಥವಾ
 ಈ ಸಾರ್ವಜನಿಕ ರಜಾದಿನಗಳಿಗೆ ಬದಲಾಗಿ ಎರಡು ಗಳಿಕೆ ರಜೆ ದಿನಗಳ ಕ್ರೆಡಿಟ್ ನೀಡಲಾಗುತ್ತದೆ

ಈ ಮಹತ್ವದ ಯೋಜನೆಯ ಉದ್ದೇಶ:

 ಬಾಕಿ ಪ್ರಕರಣಗಳ ಗಣನೀಯ ಕಡಿಮೆ ಮಾಡುವುದು
 ನಾಗರಿಕ ಅನುಕೂಲತೆಯನ್ನು ಸುಧಾರಿಸುವುದು
 ಪಾರದರ್ಶಕತೆ ಬಲಪಡಿಸುವುದು
 ಸುಲಭ, ಪರಿಣಾಮಕಾರಿ ಹಾಗೂ ನಾಗರಿಕ ಸ್ನೇಹಿ ಇ-ಖಾತಾ ಸೇವೆ ಒದಗಿಸುವುದು

“ನನ್ನ ಖಾತಾ ನನ್ನ ಹಕ್ಕು ಅಭಿಯಾನ”

“ಇ-ಖಾತಾ ಪಡೆದುಕೊಳ್ಳಿ – ವಂಚನೆಯಿAದ ತಪ್ಪಿಸಿಕೊಳ್ಳಿ”

3. ಕಟ್ಟಡದ ಉಲ್ಲಂಘನೆ ಮಿತಿಯನ್ನು ಶೇ 5ರ ಬದಲಾಗಿ ಶೇ 15 ಕ್ಕೆ ಹೆಚ್ಚಿಸಿರುವ ಬಗ್ಗೆ:

 ಬೆಂಗಳೂರು ಮಹಾನಗರದಲ್ಲಿ ಭೂಮಿಯ ಕೊರತೆ ಹೆಚ್ಚಾಗುತ್ತಿದ್ದು ಹಾಗೂ ಭೂಮಿಯ ತೀವ್ರÀ ಬೇಡಿಕೆಯಿಂದಾಗಿ ದಿನೇ ದಿನೇ ಅಗಾದ ಬೆಳವಣಿಗೆಗಳ ಒತ್ತಡದಿಂದ ನಿವೇಶನ/ ಸ್ವತ್ತಿನ ಮಾಲೀಕರು ನಿಯಮ ರೀತ್ಯಾ ನಡುಜಾಗ ಬಿಡದೆ ನಕ್ಷೆ ಉಲ್ಲಂಘನೆ ಮಾಡಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿರುವುದು ತಿಳಿದ ವಿಷಯವಾಗಿರುತ್ತದೆ.
 ಈವರೆಗೂ 5 ನಗರ ಪಾಲಿಕೆಗಳಲ್ಲಿ ಕಟ್ಟಡ ಉಪವಿಧಿಗಳಂತೆ ನಡುಜಾಗ, ಅoveಡಿಚಿge, ಈಂಖ ಹಾಗೂ ಕಟ್ಟಡದ ಎತ್ತರದಲ್ಲಿನ ಉಲ್ಲಂಘನೆ ಪ್ರಮಾಣವನ್ನು ಶೇ. 5 ರ ಮಿತಿಯಲ್ಲಿದ್ದಲ್ಲಿ ದಂಡ ಶುಲ್ಕ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲಾಗುತ್ತಿತ್ತು.
 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುತ್ತಿರುವ ಬಹುತೇಕ ಕಟ್ಟಡಗಳಲ್ಲಿ ಉಲ್ಲಂಘನೆ ಪ್ರಮಾಣವು ಶೇ 5 ಕ್ಕಿಂತ ಹೆಚ್ಚಾಗಿರುವುದು ಕಂಡು ಬಂದಿರುತ್ತದೆ. ಆದ್ದುದರಿಂದ ಇಂತಹ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಸಾಧ್ಯವಾಗುತ್ತಿಲ್ಲ.
 ಈ ಮಧ್ಯ ಈ ರೀತಿ ನಿಯಮ ಉಲ್ಲಂಘಿಸಿ ನಿರ್ಮಾಣವಾದ ಕಟ್ಟಡಗಳ ವಿರುದ್ಧ ಘನ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 17.12.2024 ರಂದು ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯದ ಕಟ್ಟಡಗಳಿಗೆ ವಿದ್ಯುತ್ ಹಾಗೂ ನೀರು ಸರಬರಾಜು ಸೌಕರ್ಯ ಒದಗಿಸಬಾರದೆಂದು ಆದೇಶಿಸಿದೆ.
 ನಕ್ಷೆ ಉಲ್ಲಂಘನೆ ಮಾಡಿ ನಿರ್ಮಿಸಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ದೊರೆಯದೆ ನೀರು ಸರಬರಾಜು ಹಾಗೂ ವಿದ್ಯುತ್ ಸಂಪರ್ಕ ಪಡೆಯಲು ಸಾದ್ಯವಾಗದೇ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುತ್ತಾರೆ.
 ಆದುದರಿಂದ, ಬೆಂಗಳೂರು ನಗರದ ಕಟ್ಟಡ ನಿರ್ಮಾಣ ನಿಯಮಗಳಲ್ಲಿ ನಡುಜಾಗ ಹಾಗೂ ಇತರೆ (Height & FAR) ಉಲ್ಲಂಘನೆಯ ಮಿತಿಯನ್ನು ಶೇ 5ರ ಬದಲಾಗಿ ಶೇ. 15 ರವರೆಗೆ ಹೆಚ್ಚಿಸಲು ದಿನಾಂಕ: 01-04-2026 ರಲ್ಲಿ 5 ನಗರ ಪಾಲಿಕೆಗಳಿಂದ ಕರಡು ತಿದ್ದಪಡಿಗಳನ್ನು ಪ್ರಕಟಿಸಲಾಗಿದೆ.
 ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಸಲಹೆ /ಆಕ್ಷೇಪಣೆಗಳನ್ನು ಪರಿಗಣಿಸಿ 5 ನಗರ ಪಾಲಿಕೆಗಳಿಂದ ಅಂತಿಮ ತಿದ್ದುಪಡಿ ನಿಯಮಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.
 ಸ್ವಂತ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಿರುವ ಮತ್ತು ಮಾಡುತ್ತಿರುವ ಮಾಲೀಕರು ಘನ ಸರ್ವೋಚ್ಚ ನ್ಯಾಯಾಲಯದ ಆದೇಶದಿಂದಾಗಿ ಸಿಲುಕಿರುವ ಸಂಕಷ್ಟವನ್ನು ನಿವಾರಿಸಲು ಸರ್ಕಾರವು ದೀರ್ಘ ಚಿಂತನೆ ನಂತರ ಇಂತಹ ಐತಿಹಾಸಿಕ ನಿರ್ದಾರ ಕೈಗೊಂಡಿದ್ದು, ಶೇ 15 ರಷ್ಟು ಪ್ರಮಾಣದ ಉಲ್ಲಂಘನೆಗಳಿಗೆ ದಂಡ ಪಾವತಿಸಿಕೊಂಡು ಸ್ವಾಧೀನಾನುಭವ ಪ್ರಮಾಣ ಪತ್ರ ನೀಡಲು ಒಪ್ಪಿಗೆ ನೀಡಲಾಗಿದೆ.
 ಈ ನಿರ್ಧಾರದಂತೆ ಇನ್ನೆರೆಡು ದಿನಗಳಲ್ಲಿ 5 ನಗರ ಪಾಲಿಕೆಗಳಿಂದ ತಿದ್ದುಪಡಿ ನಿಯಮಗಳನ್ನು ಪ್ರಕಟಿಸಲಾಗುತ್ತದೆ.