ನಟಿ ರಾಗಿಣಿಗೆ ಹೈಕೋರ್ಟ್ ಬಿಗ್ ರಿಲೀಫ್: ಡ್ರಗ್ಸ್ ಸರಬರಾಜು ಪ್ರಕರಣ ರದ್ದುಗೊಳಿಸಿ ಆದೇಶ

ಬೆಂಗಳೂರು: ಸ್ಯಾಂಡಲ್ ವುಡ್ ನಟಿ ರಾಗಿಣಿ ವಿರುದ್ಧದ ಡ್ರಗ್ಸ್ ಸರಬರಾಜು ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ಮೂಲಕ ತುಪ್ಪದ ಹುಡುಗಿ ರಾಗಿಣಿಗೆ ಬಿಗ್ ರಿಲೀಫ್ ಅನ್ನು ಹೈಕೋರ್ಟ್ ನೀಡಿದೆ.

ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ನಟಿ ರಾಗಿಣಿ ವಿರುದ್ಧ ಮಾದಕವಸ್ತು ಸರಬರಾಜು ಮಾಡಿ ಅಕ್ರಮ ಹಣ ಗಳಿಕೆ ಆರೋಪದಡಿ ಕೇಸ್ ದಾಖಲಾಗಿತ್ತು. ಈ ಪ್ರಕರಣವನ್ನು ರದ್ದುಕೋರಿ ಹೈಕೋರ್ಟ್ ಗೆ ನಟಿ ರಾಗಿಣಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಚಂದನಗೌಡರ ಅವರನ್ನೊಳಗೊಂಡ ನ್ಯಾಯಪೀಠವು, ಆರೋಪ ಪಟ್ಟಿಯಲ್ಲಿ ಸಾಕ್ಷಾಧಾರಗಳು ಹಾಗೂ ಇತರೆ ಆರೋಪಿಗಳ ಹೇಳಿಕೆಗಳನ್ನು ಹೊರತುಪಡಿಸಿ ಅರ್ಜಿದಾರರು ಪಾರ್ಟಿಗಳನ್ನು ಆಯೋಜನೆ ಮಾಡುವುದಾಗಲೀ, ಮಾದಕ ವಸ್ತುಗಳನ್ನು ಮಾರಾಟ ಮಾಡಿದ್ದರ ಬಗ್ಗೆ ಯಾವುದೇ ಸಾಕ್ಷಾಧಾರಗಳನ್ನು ತನಿಖಾಧಿಕಾರಿಗಳು ಒದಗಿಸಿಲ್ಲ. ಈ ಹಿನ್ನಲೆಯಲ್ಲಿ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ವಿಚಾರಣೆ ಮುಂದುವರೆಸುವುದು ಕಾನೂನು ದುರ್ಬಳಕೆ ಮಾಡಿಕೊಂಡಂತೆ ಆಗುತ್ತದೆ ಎಂಬುದಾಗಿ ಅಭಿಪ್ರಾಯ ಪಟ್ಟು, ಪ್ರಕರಣ ರದ್ದುಗೊಳಿಸಿ ಆದೇಶಿಸಿದೆ.