ರಾಜ್ಯ ಸರ್ಕಾರದಿಂದ 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಅಧಿಕೃತ ಪಟ್ಟಿ ಪ್ರಕಟ | General Holidays

Official list of general holidays for the year 2027 announced by the State Government

ಬೆಂಗಳೂರು: ರಾಜ್ಯ ಸರ್ಕಾರವು (State Government) 2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳು (General Holidays) ಮತ್ತು ಸರ್ಕಾರಿ ನೌಕರರ ಪರಿಮಿತ ರಜಾ ದಿನಗಳ (Restricted Holidays) ಅಧಿಕೃತ ಪಟ್ಟಿಯನ್ನು ಶನಿವಾರ (ನವೆಂಬರ್ 21, 2026) ಪ್ರಕಟಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ರಾಜ್ಯ ಶಿಷ್ಟಾಚಾರ) ಅಧೀನ ಕಾರ್ಯದರ್ಶಿ ರವಿಕುಮಾರ್ ಎಸ್. ಅವರು ರಾಜ್ಯಪಾಲರ ಆದೇಶಾನುಸಾರ ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಹಾಗೂ ಭಾನುವಾರಗಳ ಜೊತೆಗೆ ಒಟ್ಟು 18 ಸಾರ್ವತ್ರಿಕ ರಜೆಗಳು(General Holidays) ಮತ್ತು 19 ಪರಿಮಿತ ರಜೆಗಳನ್ನು 2027ನೇ ವರ್ಷಕ್ಕೆ ಮಂಜೂರು ಮಾಡಲಾಗಿದೆ.

2027ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ (18 ದಿನಗಳು):

ಕ್ರಮ ಸಂಖ್ಯೆದಿನಾಂಕವಾರರಜಾ ದಿನ / ಹಬ್ಬ
115.01.2027ಶುಕ್ರವಾರ

ಮಕರ ಸಂಕ್ರಾಂತಿ / ಉತ್ತರಾಯಣ ಪುಣ್ಯಕಾಲ

226.01.2027ಮಂಗಳವಾರ

ಗಣರಾಜ್ಯೋತ್ಸವ ದಿನ

306.03.2027ಶನಿವಾರ

ಮಹಾ ಶಿವರಾತ್ರಿ

410.03.2027ಬುಧವಾರ

ಖುತುಬ್-ಎ-ರಂಜಾನ್

526.03.2027ಶುಕ್ರವಾರ

ಗುಡ್ ಫ್ರೈಡೇ

607.04.2027ಬುಧವಾರ

ಚಾಂದ್ರಮಾನ ಯುಗಾದಿ

714.04.2027ಬುಧವಾರ

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ

801.05.2027ಶನಿವಾರ

ಕಾರ್ಮಿಕ ದಿನಾಚರಣೆ

917.05.2027ಸೋಮವಾರ

ಬಕ್ರೀದ್

1016.06.2027ಬುಧವಾರ

ಮೊಹರಂ ಕಡೆ ದಿನ

1104.09.2027ಶನಿವಾರ

ವರಸಿದ್ಧಿ ವಿನಾಯಕ ವ್ರತ

1229.09.2027ಬುಧವಾರ

ಮಹಾಲಯ ಅಮಾವಾಸ್ಯೆ

1302.10.2027ಶನಿವಾರ

ಗಾಂಧಿ ಜಯಂತಿ

1415.10.2027ಶುಕ್ರವಾರ

ವಾಲ್ಮೀಕಿ ಜಯಂತಿ

1528.10.2027ಗುರುವಾರ

ನರಕ ಚತುರ್ದಶಿ

1630.10.2027ಶನಿವಾರ

ದೀಪಾವಳಿ

1701.11.2027ಸೋಮವಾರ

ಕನ್ನಡ ರಾಜ್ಯೋತ್ಸವ

1816.11.2027ಮಂಗಳವಾರ

ಕನಕದಾಸ ಜಯಂತಿ

ಭಾನುವಾರ ಮತ್ತು ಶನಿವಾರ ಬರುವ ಪ್ರಮುಖ ಹಬ್ಬಗಳು (ಪಟ್ಟಿಯಲ್ಲಿ ಸೇರಿಲ್ಲ):

ಮಹಾವೀರ ಜಯಂತಿ (ಏಪ್ರಿಲ್ 18), ಬಸವೇಶ್ವರ ಜಯಂತಿ (ಮೇ 9), ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್-ಮಿಲಾದ್ (ಆಗಸ್ಟ್ 15) ಹಾಗೂ ವಿಜಯದಶಮಿ (ಅಕ್ಟೋಬರ್ 10) ಭಾನುವಾರದಂದು ಬರುವುದರಿಂದ ಪ್ರತ್ಯೇಕವಾಗಿ ನಮೂದಿಸಿಲ್ಲ. ಅದೇ ರೀತಿ ಮಹಾನವಮಿ/ಆಯುಧಪೂಜೆ (ಅಕ್ಟೋಬರ್ 9) ಎರಡನೇ ಶನಿವಾರ ಹಾಗೂ ಕ್ರಿಸ್‌ಮಸ್ (ಡಿಸೆಂಬರ್ 25) ನಾಲ್ಕನೇ ಶನಿವಾರದಂದು ಬರುವುದರಿಂದ ಪಟ್ಟಿಯಲ್ಲಿ ಸೇರಿಸಲಾಗಿಲ್ಲ.

ಕೊಡಗು ಜಿಲ್ಲೆಗೆ ಸ್ಥಳೀಯ ರಜೆ ಮತ್ತು ಬ್ಯಾಂಕ್ ರಜೆ:

ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸೆಪ್ಟೆಂಬರ್ 3ರಂದು (ಶುಕ್ರವಾರ) ಕೈಲ್ ಮುಹೂರ್ತ, ಅಕ್ಟೋಬರ್ 18ರಂದು (ಸೋಮವಾರ) ತುಲಾ ಸಂಕ್ರಮಣ ಹಾಗೂ ಡಿಸೆಂಬರ್ 13ರಂದು (ಸೋಮವಾರ) ಹುತ್ತರಿ ಹಬ್ಬದ ಪ್ರಯುಕ್ತ ಸ್ಥಳೀಯ ಸಾರ್ವತ್ರಿಕ ರಜೆ ಘೋಷಿಸಲಾಗಿದೆ. ಇನ್ನು ಏಪ್ರಿಲ್ 1, 2027ರಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳ ವಾರ್ಷಿಕ ಲೆಕ್ಕಪತ್ರ ಮುಕ್ತಾಯದ ದಿನವಾಗಿರುವುದರಿಂದ ಬ್ಯಾಂಕುಗಳಿಗೆ ಮಾತ್ರ ರಜೆ ಇರಲಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಪ್ರತ್ಯೇಕ ರಜಾ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಪ್ರಕಟಿಸಲಿದ್ದಾರೆ.

ಪರಿಮಿತ ರಜಾ ದಿನಗಳ ಪಟ್ಟಿ (19 ದಿನಗಳು):

ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದು ವರ್ಷದಲ್ಲಿ ಗರಿಷ್ಠ ಎರಡು ಪರಿಮಿತ ರಜೆಗಳನ್ನು (RH) ಬಳಸಿಕೊಳ್ಳಬಹುದು. 2027ರಲ್ಲಿ ಜನವರಿ 1 (ಹೊಸ ವರ್ಷ), ಫೆಬ್ರವರಿ 15 (ಮಧ್ವ ನವಮಿ), ಮಾರ್ಚ್ 5 (ಜುಮಾತ್-ಉಲ್-ವಿದಾ), ಏಪ್ರಿಲ್ 15 (ಶ್ರೀರಾಮನವಮಿ), ಮೇ 10 (ರಾಮಾನುಜಾಚಾರ್ಯ ಜಯಂತಿ), ಮೇ 11 (ಶಂಕರಾಚಾರ್ಯ ಜಯಂತಿ), ಮೇ 20 (ಬುದ್ಧ ಪೂರ್ಣಿಮಾ), ಆಗಸ್ಟ್ 13 (ವರಮಹಾಲಕ್ಷ್ಮಿ ವ್ರತ), ಆಗಸ್ಟ್ 16 (ಋಗ್ ಉಪಾಕರ್ಮ), ಆಗಸ್ಟ್ 17 (ಯಜುರ್ ಉಪಾಕರ್ಮ), ಆಗಸ್ಟ್ 24 (ಶ್ರೀಕೃಷ್ಣ ಜನ್ಮಾಷ್ಟಮಿ), ಸೆಪ್ಟೆಂಬರ್ 3 (ಸ್ವರ್ಣಗೌರಿ ವ್ರತ), ಸೆಪ್ಟೆಂಬರ್ 8 (ಕನ್ಯಾ ಮರಿಯಮ್ಮ ಜಯಂತಿ), ಸೆಪ್ಟೆಂಬರ್ 14 (ಅನಂತಪದ್ಮನಾಭ ವ್ರತ), ಸೆಪ್ಟೆಂಬರ್ 15 (ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ), ಸೆಪ್ಟೆಂಬರ್ 17 (ವಿಶ್ವಕರ್ಮ ಜಯಂತಿ), ಅಕ್ಟೋಬರ್ 18 (ತುಲಾ ಸಂಕ್ರಮಣ), ಡಿಸೆಂಬರ್ 13 (ಹುತ್ತರಿ ಹಬ್ಬ) ಹಾಗೂ ಡಿಸೆಂಬರ್ 24 (ಕ್ರಿಸ್‌ಮಸ್ ಈವ್) ಪರಿಮಿತ ರಜೆಗಳಾಗಿವೆ.